Home ಟಾಪ್ ಸುದ್ದಿಗಳು ಎಸಿ ಸ್ಪೋಟ; ನವ ವಿವಾಹಿತ ಮೃತ್ಯು

ಎಸಿ ಸ್ಪೋಟ; ನವ ವಿವಾಹಿತ ಮೃತ್ಯು

ಚೆನ್ನೈ: ರಾತ್ರಿ ನಿದ್ರಿಸುತಿದ್ದಾಗ ಎಸಿ ಸ್ಪೋಟಗೊಂಡು ಯವಕನೋರ್ವ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಪೆರಂಬೂರ್ ನಲ್ಲಿ ನಡೆದಿದೆ.

ಪೆರಂಬೂರ್ ಮನವಾಳನ್ ಬಡಾವಣೆಯ ಶ್ಯಾಮ್ (28) ಮೃತ ದುರ್ದೈವಿಯಾಗಿದ್ದಾರೆ.

ಮನೆಯ ಕೆಳ ಮಹಡಿಯ ಕೋಣೆಯಲ್ಲಿ ಶ್ಯಾಮ್ ಮಲಗಿದ್ದರು. ರಾತ್ರಿ ಕೆಳ ಮಹಡಿಯಿಂದ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು, ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದ ತಂದೆ ಪ್ರಭಾಕರನ್ ಕೆಳಗಡೆ ಓಡಿ ಬಂದಾಗ ದಟ್ಟ ಹೊಗೆ ಆವರಿಸಿದ್ದನ್ನು ಕಂಡ ಅವರು ಬಾಗಿಲು ಮುರಿದು ಒಳಹೋಗಿ ನೋಡಿದರೆ, ಎಸಿ ಸ್ಫೋಟದಿಂದ ಮಗ  ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶ್ಯಾಮ್ ಅವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಶ್ಯಾಮ್ ಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ದುರ್ಘಟನೆ ನಡೆದ ದಿನ ಪತ್ನಿ ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ.

Join Whatsapp
Exit mobile version