Home ಟಾಪ್ ಸುದ್ದಿಗಳು ಸ್ವಯಂ ಘೋಷಿತ ದೇವಮಾನವನ ನಿರ್ದೇಶನದಂತೆ ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೋಳಿ ರಕ್ತ ಕುಡಿಸಿದ ಮಾವ...

ಸ್ವಯಂ ಘೋಷಿತ ದೇವಮಾನವನ ನಿರ್ದೇಶನದಂತೆ ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೋಳಿ ರಕ್ತ ಕುಡಿಸಿದ ಮಾವ !

ಮುಂಬೈ: ಸ್ವಯಂ ಘೋಷಿತ ದೇವಮಾನವ ನಿರ್ದೇಶನದಂತೆ ಮಾವ, ತನ್ನ ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


ಮಾನಸಿಕ ಹಾಗೂ ದೈಹಿಕ ಕಿರುಕುಳ ಸಂಬಂಧ 33 ವರ್ಷದ ಮಹಿಳೆ ತನ್ನ ಮಾವ ಮತ್ತು ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಮಾವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2018ರಿಂದ ಅಂದರೆ ಮದುವೆಯಾದಾಗಿನಿಂದಲೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.


ಸದ್ಯ ಮಹಿಳೆಯ ದೂರಿನ ಅನ್ವಯ ತನಿಖೆ ನಡೆಸುತ್ತಿದ್ದೇವೆ. ಅಲ್ಲದೆ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವುದಾಗಿ ಪೊಲಿಸ್ ಇನ್ಸ್ ಪೆಕ್ಟರ್ ಜಿತೇಂದ್ರ ಕದಂ ತಿಳಿಸಿದ್ದಾರೆ.

Join Whatsapp
Exit mobile version