ಕೇರಳ: ಎಐಸಿಸಿ ಆಯೋಜಿಸಿದ ನವಸಂಕಲ್ಪ ಯಾತ್ರೆಯ ನಿಯಾಟುಂಕರ ಬ್ಲಾಕ್ ಕಾಂಗ್ರೆಸ್ ಘಟಕದ ಪಾದಯಾತ್ರೆಯುದ್ದಕ್ಕೂ ಅರ್ ಎಸ್ ಎಸ್ ಗಾನಾಂಜಲಿ ಮೊಳಗಿದ್ದು ಇದೀಗ ವಿವಾದವಾಗಿದೆ.
ಯುಡಿಎಫ್ ಕನ್ವೀನರ್ ಎಂ.ಎಂ ಹಸನ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಪಾಲೋಡ್ ರವಿ, ಕೆಪಿಸಿಸಿ ಸದಸ್ಯ ಶ್ರೀಕುಮಾರ್ ಸಹಿತ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಕಾಂಗ್ರೆಸ್ ಪಾದಯಾತ್ರೆ ಉದ್ದಕ್ಕೂ ಆರ್ ಎಸ್ ಎಸ್ ನ ಶಾಖೆಯಲ್ಲಿ ಹಾಡುವಂತಹ ಗಾಣಾಂಜಲಿಯ ಪ್ರಧಾನ ಗೀತೆ ಮೊಳಗುತ್ತಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಾಡು ಹೇಗೆ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮೊಳಗಿತು ಎಂಬ ವಿಮರ್ಶೆಗಳು ಸಾಮಾಜಿಕ ವಲಯಗಳಲ್ಲಿ ತೀವ್ರವಾದವು. ಆ ಬೆನ್ನಲ್ಲೇ ಕಾರ್ಯಕ್ರಮದ ವೀಡೀಯೋವನ್ನು ಪಕ್ಷದ ಅಧಿಕೃತ ಖಾತೆಯಿಂದ ತೆಗೆದು ಹಾಕಲಾಯಿತು ಎಂದು ತಿಳಿದು ಬಂದಿದೆ.