Home ಟಾಪ್ ಸುದ್ದಿಗಳು ಬಜ್ಪೆ ವಿಮಾನ ನಿಲ್ದಾಣ: ಚಪ್ಪಲಿಯಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಬಜ್ಪೆ ವಿಮಾನ ನಿಲ್ದಾಣ: ಚಪ್ಪಲಿಯಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಮಂಗಳೂರು: ಚಪ್ಪಲಿಯಲ್ಲಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಊರಿಗೆ ಮರಳುತ್ತಿದ್ದ ಕಾಸರಗೋಡು ನಿವಾಸಿಯೊಬ್ಬ ಚಪ್ಪಲಿಯಲ್ಲಿ 332 ಗ್ರಾಂ ಚಿನ್ನ ಸಾಗಿಸುತ್ತಿದ್ದು ಅಧಿಕಾರಿಗಳು ಅದನ್ನು ಪತ್ತೆ ಹಚ್ಚಿದ್ದಾರೆ.

ಚಿನ್ನದ ಮೌಲ್ಯ ಸರಿಸುಮಾರು 17,4300 ರೂ ಎಂದು ಅಂದಾಜಿಸಲಾಗಿದ್ದು ಆ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Join Whatsapp
Exit mobile version