Home ಟಾಪ್ ಸುದ್ದಿಗಳು ಪ್ರವಾದಿ ವಿರುದ್ಧದ ಟ್ವೀಟ್, ಟೀಕೆ ಸರ್ಕಾರದ ಅಭಿಪ್ರಾಯವಲ್ಲ: ವಿದೇಶಾಂಗ ಇಲಾಖೆ

ಪ್ರವಾದಿ ವಿರುದ್ಧದ ಟ್ವೀಟ್, ಟೀಕೆ ಸರ್ಕಾರದ ಅಭಿಪ್ರಾಯವಲ್ಲ: ವಿದೇಶಾಂಗ ಇಲಾಖೆ

ನವದೆಹಲಿ: ಸದ್ಯ ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಯ ಬಗ್ಗೆ ಅರಬ್ ರಾಷ್ಟ್ರಗಳಲ್ಲಿ ಭಾರತವು ವ್ಯಾಪಕ ಆಕ್ರೋಶ ಎದುರಿಸುತ್ತಿರುವ ಮಧ್ಯೆ ಇದು ಸರ್ಕಾರದ ಅಧಿಕೃತ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪ್ರವಾದಿ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದ ಟೀಕೆ ಮತ್ತು ಟ್ವೀಟ್ ಸರ್ಕಾರದ ಅಭಿಪ್ರಾಯವಲ್ಲ ಎಂದು ತಿಳಿಸಿದ್ದಾರೆ.

ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version