Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಎರಡು ತಲೆಯ ಹಾವು ಎಂದ ಶ್ರೀರಾಮುಲು !

ಸಿದ್ದರಾಮಯ್ಯ ಎರಡು ತಲೆಯ ಹಾವು ಎಂದ ಶ್ರೀರಾಮುಲು !

ಕೊಪ್ಪಳ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಿದ್ದರಾಮಯ್ಯ ಎರಡು ನಾಲಿಗೆ ಇರುವ ಹಾವು ಇದ್ದಂತೆ, ಅವರಿಗೆ ಬಿಜೆಪಿ ಪಕ್ಷದವರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಬಿಜೆಪಿಗರನ್ನು ನಾಯಿಗೆ ಹೋಲಿಕೆ ಮಾಡುತ್ತಿದ್ದಾರೆ, ಆದರೆ ಯಾವ ನೈತಿಕತೆಯಿಂದ ಅವರು ಆರೋಪ ಮಾಡುತ್ತಿದ್ದಾರೆಂದು ಅವರಿಗೆ ಗೊತ್ತಿಲ್ಲ, ಅವರೀಗ ಕಾಂಗ್ರೆಸ್ ಪಕ್ಷದಲ್ಲಿ ಏಕಾಂಗಿಯಾಗಿರುವ ನಾಯಕನಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಬೆಳಗ್ಗೆ ಒಂದು ಮಾತನಾಡಿದರೆ ಸಂಜೆ ಮತ್ತೊಂದು ಮಾತನಾಡುತ್ತಾರೆ. ಮಾತನಾಡುವ ಪರಿಜ್ಞಾನ ಅವರಿಗೆ ಇಲ್ಲ. ರಾಜಕೀಯದ ಕಾಂಗ್ರೆಸ್ ಪಕ್ಷದಲ್ಲಿ ಚೆಸ್ ಆಟವಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಇರುವ ಡಿಕೆಶಿ ಅವರನ್ನು ಯಾವ ರೀತಿ ಮುಗಿಸಬೇಕು ಎಂದು ಯೋಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Join Whatsapp
Exit mobile version