Home ಕ್ರೀಡೆ 4 ಓವರ್ ಮೇಡನ್‌, 3 ವಿಕೆಟ್‌: ಲಾಕಿ ಫರ್ಗುಸನ್ ವಿಶ್ವದಾಖಲೆ

4 ಓವರ್ ಮೇಡನ್‌, 3 ವಿಕೆಟ್‌: ಲಾಕಿ ಫರ್ಗುಸನ್ ವಿಶ್ವದಾಖಲೆ

ಟ್ರಿನಿಡಾಡ್: ಟಿ20 ಕ್ರಿಕೆಟ್‌ನಲ್ಲಿ ಒಂದು ಮೇಡನ್‌ ಓವರ್ ಬಂದರೂ ಗಮನ ಸೆಳೆಯುತ್ತದೆ. ಆದರೆ ನ್ಯೂಜಿಲೆಂಡ್‌ನ ವೇಗದ ಬೌಲರ್ ಲಾಕಿ ಲಾಕಿ ಫರ್ಗುಸನ್ ತನ್ನ ಕೋಟಾದ 4 ಓವರ್‌ ಮೇಡನ್‌ ಮಾಡಿ 3 ವಿಕೆಟ್‌ ಕಿತ್ತು ವಿಶ್ವ ದಾಖಲೆ ಬರೆದಿದ್ದಾರೆ.

ಸಿ’ ಗುಂಪಿನ ಲೀಗ್‌ ಪಂದ್ಯದಲ್ಲಿ ಲಾಕಿ ಫರ್ಗುಸನ್ ಪಾಪುವಾ ನ್ಯೂಗಿನಿ ವಿರುದ್ಧ ಈ ವಿಶಿಷ್ಟ ದಾಖಲೆ ಬರೆದಿದ್ದಾರೆ.

ಲಾಕಿ ಫರ್ಗ್ಯುಸನ್ ತಮ್ಮ ಪಾಲಿನ ಕೋಟಾದ ನಾಲ್ಕೂ ಓವರ್‌ಗಳನ್ನು ಮೇಡನ್ ಓವರ್‌ಗಳನ್ನಾಗಿಸಿ 3 ವಿಕೆಟ್ ಪಡೆದದ್ದು ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಗಿದೆ. ಒಂದೇ ಒಂದು ರನ್ ನೀಡದೇ 3 ವಿಕೆಟ್ ಪಡೆಯುವ ಮೂಲಕ ಲಾಕಿ ಫರ್ಗ್ಯುಸನ್ ಹೊಸ ದಾಖಲೆ ಬರೆದಿದ್ದು, ಭವಿಷ್ಯದಲ್ಲಿ ಈ ದಾಖಲೆಯನ್ನು ಮುರಿಯುವುದು ಯಾವ ಕ್ರಿಕೆಟಿಗನಿಗೂ ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಲದೆ, ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿದ್ದಾರೆ.

ಲಾಕಿ ಫರ್ಗ್ಯುಸನ್

Join Whatsapp
Exit mobile version