ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾಗಲೇ ಮಾಜಿ ಎಂಎಲ್‌ಸಿ ಎಂಬಿ ಭಾನುಪ್ರಕಾಶ್ ನಿಧನ

Prasthutha|

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ವೇಳೆಯೇ ಮಾಜಿ ಎಂಎಲ್‌ಸಿ ಬಿಜೆಪಿಯ ಹಿರಿಯ ನಾಯಕ ಎಂಬಿ ಭಾನುಪ್ರಕಾಶ್ ನಿಧನರಾಗಿದ್ದಾರೆ.

- Advertisement -

ಪೆಟ್ರೋಲ್-ಡೀಸೆಲ್‌ಗೆ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು ಹಠಾತ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ.

2013 ರಿಂದ 2019ರ ತನಕರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಭಾನುಪ್ರಕಾಶ್ ಅದಕ್ಕೂ ಮೊದಲು ಜಿಲ್ಲಾ ಪಂಚಾಯತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಬಿಜೆಪಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪಕ್ಷದ ಕಾರ್ಯ ನಿರ್ವಹಿಸಿದ್ದ ಭಾನುಪ್ರಕಾಶ್ ಸಂಘ ಪರಿವಾರದ ಹಿನ್ನೆಲೆ ಹೊಂದಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಭಾನುಪ್ರಕಾಶ್, ಪ್ರಸ್ತುತ ನಾಲ್ಕು ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಣೆ ಮಾಡಿದ್ದರು.

Join Whatsapp
Exit mobile version