ರಾಮನಗರ: ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ತಾಯಿ ಮತ್ತು ಮಗ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದಿದೆ.
ಶೋಭಾ (40), ಪುತ್ರ ದಿಲೀಪ್ (16) ಮೃತಪಟ್ಟವರು.
ಗೀಸರ್ ಆನ್ ಮಾಡಿ ಮನೆಯ ಸದಸ್ಯರು ಮರೆತು ಹೋಗಿದ್ದಾರೆ. ಬಾಗಿಲು, ಕಿಟಕಿ ಮುಚ್ಚಿದ್ದರಿಂದ ಮನೆಯೊಳಗೆ ವಿಷಾನಿಲ ಆವರಿಸಿಕೊಂಡಿದೆ. ಹೀಗಾಗಿ ಶ್ವಾಸಕೋಶ ವಿಷಹೊಕ್ಕಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.