Home ಟಾಪ್ ಸುದ್ದಿಗಳು ಪ್ರವಾದಿವರ್ಯರು ಸರ್ವ ಲೋಕದ ಮನುಷ್ಯರಿಗೆಲ್ಲರಿಗೂ ಮಾದರಿ; ನಮ್ಮೆಲ್ಲರ ಜೀವನದಲ್ಲಿ ಮನುಷ್ಯತ್ವವನ್ನು ಅಳವಡಿಸಿಕೊಳ್ಳಬೇಕು : ಪುತ್ತೂರು ತಂಗಳ್

ಪ್ರವಾದಿವರ್ಯರು ಸರ್ವ ಲೋಕದ ಮನುಷ್ಯರಿಗೆಲ್ಲರಿಗೂ ಮಾದರಿ; ನಮ್ಮೆಲ್ಲರ ಜೀವನದಲ್ಲಿ ಮನುಷ್ಯತ್ವವನ್ನು ಅಳವಡಿಸಿಕೊಳ್ಳಬೇಕು : ಪುತ್ತೂರು ತಂಗಳ್

ಪುತ್ತೂರು : ಮಸ್ಜಿದುಲ್ ಜಾಮಿಯಾ ಅಬೂಬಕ್ಕರ್ ಸಿದ್ದೀಕ್ ಮುಕ್ರಂಪಾಡಿ, ನಾಜುತುದ್ದರೈನ್ ಸ್ವಲಾತ್ ಕಮಿಟಿ, skssf ಮುಕ್ರಂಪಾಡಿ ಶಾಖೆ ಹಾಗೂ ಈದ್ ಮಿಲಾದ್ ಸಮಿತಿ ಮುಕ್ರಂಪಾಡಿ ಜಂಟಿ ಆಶ್ರಯದಲ್ಲಿ ಮರ್ಹೂಂ ಅಬ್ದುಲ್ ಖಾದರ್ ಹಾಜಿ ವೇದಿಕೆಯಲ್ಲಿ ಮೂರು ದಿನಗಳ ಮಿಲಾದ್ ಸಮಾವೇಶ ಹಾಗೂ ರಾಜ್ಯ ಮಟ್ಟದ ದಫ್ಫ್ ಪ್ರದರ್ಶನ ನಡೆಯಿತು.

ಮೊದಲನೆ ದಿನ ಮಿಲಾದ್ ಸಮಾವೇಶವನ್ನು ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ಉದ್ಘಾಟಿಸಿ, ದುಃಆ ಆಶೀರ್ವಚನ ಮಾಡಿದರು. ಜಮಾಹತ್ ಅಧ್ಯಕ್ಷರಾದ ಇಬ್ರಾಹಿಂ ಕೆ ಎಂ ಅಧ್ಯಕ್ಷತೆ ವಹಿಸಿ, ಸ್ಥಳೀಯ ಖತೀಬರು ಸಿದ್ದೀಕ್ ಫೈಝಿ ಪ್ರಸ್ತಾವಿಕ ಮಾಡಿದರು.

ವೇದಿಕೆಯಲ್ಲಿ ಸ್ಥಳೀಯ ಮದ್ರಸ ಉಸ್ತಾದ್ ಜಾಬೀರ್ ಉಮೈದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಉಲಮಾ ಉಮರಗಳು ಅತಿಥಿಗಳಾಗಿ ಭಾಗವಹಿಸಿದರು.
Sksssf ಶಾಖೆ ವತಿಯಿಂದ ಮಾಜಿ ಜಮಾಹತ್ ಸದಸ್ಯರನ್ನು ಸನ್ಮಾನ ಮಾಡಲಾಯಿತು.ಬಳಿಕ ರಾಜ್ಯಮಟ್ಟದ ಆಹ್ವಾನಿತ ದಫ್ಫ್ ತಂಡಗಳಿಂದ ದಫ್ಫ್ ಪ್ರದರ್ಶನ ನಡೆಯಿತು.

ಎರಡನೇ ದಿನ ಮೌಲೂದ್ ಪಾರಾಯಣ,ಮದ್ರಸ ಮಕ್ಕಳ ಮೆಹಫಿಲೆ ಮಿಲಾದ್ :2023 ಹಾಗೂ ಬುರ್ದಾ ಅಲಾಪಣೆ, ಬಹುಮಾನ ವಿತರಣೆ, ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಕೊನೆಯ ದಿನ ದಾರುಸ್ಸಲಮ್ ದಫ್ಫ್ ತಂಡದಿಂದ ದಫ್ಫ್, SBV ವಿದ್ಯಾರ್ಥಿಗಳ ಸ್ಕೌಟ್ ಮೂಲಕ ಬೃಹತ್ ಮಿಲಾದ್ ಜಾಥಾ ಹಾಗೂ ಸಾರ್ವಜನಿಕ ಅನ್ನದಾನ ನಡೆಯಿತು.

ಕಾರ್ಯಕ್ರಮದ ಅಚ್ಚು ಕಟ್ಟಾಗಿ ನೆರವೇರಿಸಲು ಜಮಾತ್ ಕಮಿಟಿ ಉಪಾಧ್ಯಕ್ಷರಾದ ಶರೀಫ್ ಬಿ. ಎಂ ಹಾಗೂ ಕಾರ್ಯದರ್ಶಿ ಹಾರಿಸ್ ಮತ್ತು ಕೋಶಾಧಿಕಾರಿ ಅಬೂಬಕ್ಕರ್ ಹಾಗೂ ಈದ್ ಮಿಲಾದ್ ಕಮಿಟಿ ಅಧ್ಯಕ್ಷರಾದ ಖಾಲಿದ್ ಹಾಗೂ ಕಾರ್ಯದರ್ಶಿ ಶಾಕಿರ್ ಪರ್ಲಡ್ಕ ಹಾಗೂ ಕಮಿಟಿಯಾ ಎಲ್ಲಾ ಪದಾಧಿಕಾರಿಗಳು ನೇತೃತ್ವ ವಹಿಸಿ ದರು ಮತ್ತು ಸ್ವಾಗತ ಭಾಷಣ ವನ್ನು ರಫೀಕ್ ಎಂ. ಕೆ ಹಾಗೂ ಧನ್ಯವಾದವನ್ನು ಅಶ್ರಫ್ ಸಂಪ್ಯ ನೆರವೇರಿಸಿದರು.

Join Whatsapp
Exit mobile version