Home ಟಾಪ್ ಸುದ್ದಿಗಳು ದೆಹಲಿಯ ಸ್ವಯಂಘೋಷಿತ ಗೋರಕ್ಷಕನಿಂದ ಹಿಂಸಾತ್ಮಕ ವೀಡಿಯೊ ಪೋಸ್ಟ್: ಝುಬೈರ್ ಕಳವಳ

ದೆಹಲಿಯ ಸ್ವಯಂಘೋಷಿತ ಗೋರಕ್ಷಕನಿಂದ ಹಿಂಸಾತ್ಮಕ ವೀಡಿಯೊ ಪೋಸ್ಟ್: ಝುಬೈರ್ ಕಳವಳ

ನವದೆಹಲಿ: ದೆಹಲಿಯ ಸ್ವಯಂಘೋಷಿತ ಗೋರಕ್ಷಕ ರಾಕಿ ರಾಣಾ ಸಾಮಾಜಿಕ ಮಾಧ್ಯಮದಲ್ಲಿ ಹಿಂಸಾತ್ಮಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಚಾಳಿ ಮುಂದುವರೆಸಿದ್ದು, ಅಮಾಯಕರಿಬ್ಬರಿಗೆ ಥಳಿಸುವ ವೀಡಿಯೋವೊಂದನ್ನು ಹೊಸತಾಗಿ ಪೋಸ್ಟ್ ಮಾಡಿದ್ದಾನೆ. ಇದಕ್ಕೆ ಪತ್ರಕರ್ತ ಮುಹಮ್ಮದ್ ಝಬೈರ್ ಕಳವಳ ವ್ಯಕ್ತಪಡಿಸಿದ್ದಾರೆ.

ರಾಣಾನ ಪ್ರಸ್ತುತ ಹಿಂಸಾಂತ್ಮಕ ಪೋಸ್ಟನ್ನು ಝಬೈರ್ ದೆಹಲಿ ಪೊಲೀಸರು, ಪೊಲೀಸ್ ಆಯುಕ್ತರು ಮತ್ತು ಇತರ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಾಕಿ ರಾಣಾ ಪೋಸ್ಟ್ ಮಾಡಿದ ಹಿಂಸಾತ್ಮಕ ವೀಡಿಯೊದಲ್ಲಿ ಗೋಸಾಗಾಟ ನಡೆಸಿದ್ದಾರೆ ಎಂದು ಇಬ್ಬರನ್ನು ಥಳಿಸುವುದನ್ನು ಕಾಣಬಹುದಾಗಿದೆ.

ರಾಣಾ ಅವರ ವಿರುದ್ಧ ಅನೇಕ ಪ್ರಕರಣಗಳಿವೆ. ಆತ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದನ್ನು ಮುಂದುವರಿಸಿದ್ದಾನೆ. ಇಂತಹ ದಾಳಿಗಳಿಗೆ ನಿಧಿ ಸಂಗ್ರಹಣೆ ಮಾಡಲು, ರಾಣಾ ಸಾಮಾಜಿಕ ಮಾಧ್ಯಮದಲ್ಲಿ ದೇಣಿಗೆಯನ್ನು ಕೇಳುತ್ತಿದ್ದಾನೆ ಎಂದು ಝುಬೈರ್ ತಿಳಿಸಿದ್ದಾರೆ.

Join Whatsapp
Exit mobile version