Home ಟಾಪ್ ಸುದ್ದಿಗಳು ಪಾಕಿಸ್ತಾನ: ಸಿಡಿಲು ಬಡಿದು 14 ಮಂದಿ ಮೃತ್ಯು

ಪಾಕಿಸ್ತಾನ: ಸಿಡಿಲು ಬಡಿದು 14 ಮಂದಿ ಮೃತ್ಯು

ಲಾಹೋರ್: ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತ್ಯಗಳ ಕೆಲವು ಭಾಗಗಳಲ್ಲಿ ಇಂದು ಭಾರಿ ಮಳೆಯಾಗಿದೆ. ಈ ಸಂದರ್ಭ ಸಿಡಿಲು ಬಡಿದು ಕ 14 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಯಾಗಿದೆ.

ಬಲೂಚಿಸ್ತಾನದ ಸುರಬ್ ಜಿಲ್ಲೆಯ ತನಾಕ್ ಪ್ರದೇಶದ ತೋಟದಲ್ಲಿ ಕುಳಿತಿದ್ದ ಫರೀದ್ ಅಹ್ಮದ್ ಮತ್ತು ಜಬೀರ್ ಅಹ್ಮದ್ ಎಂಬ ಇಬ್ಬರು ಯುವಕರು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ಪಿಶಿನ್ ಜಿಲ್ಲೆಯಲ್ಲಿ ಮತ್ತು ಡೇರಾ ಬುಗ್ತಿ ಜಿಲ್ಲೆಯಲ್ಲಿ ಒಬ್ಬೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ರಹೀಮ್ ಯಾರ್ ಖಾನ್ ಜಿಲ್ಲೆಯ ಬಸ್ತಿ ಕಲ್ವಾರ್ನಲ್ಲಿ ಇಬ್ಬರು, ತುಲ್ ಹಸನ್‌ನಲ್ಲಿ ಒಬ್ಬರು, ಬಸ್ತಿ ಖೋಖ್ರಾನ್ ಫಿರೋಜಾದಲ್ಲಿ ಗಂಡ-ಹೆಂಡತಿ, ಖಾನ್ ಬೇಲಾದಲ್ಲಿ ರೈತರೊಬ್ಬರು ಮತ್ತು ಮಾರಿ ಅಲ್ಲಾಹ್‌ನಲ್ಲಿ ಕುರುಬರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಖೈರ್ಪುರ್ ದಹಾದಲ್ಲಿ ಒಬ್ಬರು ಮತ್ತು ಬಹವಾಲ್ಪುರ ಜಿಲ್ಲೆಯ ಚಕ್ -113 ಪ್ರದೇಶದಲ್ಲಿ ಎಂಟು ವರ್ಷದ ಮಗು ಸಿಡಿಲು ಬಡಿದು ಸಾವನ್ನಪ್ಪಿದೆ. ಲೋದ್ರಾನ್‌ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

Join Whatsapp
Exit mobile version