Home ಟಾಪ್ ಸುದ್ದಿಗಳು SDPI ಪಾವೂರು ಗ್ರಾಮ ಸಮಿತಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ

SDPI ಪಾವೂರು ಗ್ರಾಮ ಸಮಿತಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ

ಪಾವೂರು: ಎಸ್.ಡಿ.ಪಿ.ಐ ಪಾವೂರು ಗ್ರಾಮ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ “ದ್ವಜಾರೋಹಣ ಕಾರ್ಯಕ್ರಮ”ವು ISC ಕಚೇರಿ ಮುಂಭಾಗದಲ್ಲಿ ನಡೆಯಿತು.

ಗ್ರಾಮದ ಇನೋಳಿ, ಅರಸ್ತಾನ, ಟಿಪ್ಪುನಗರ,ಮಲಾರ್ ಪದವು,ಪಂಚಾಯತ್ ಬಳಿ ಬೂತ್ ಸಮಿತಿಗಳ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷರಾದ ಶಮೀರ್ ಟಿಪ್ಪುನಗರ ವಹಿಸಿ,ಧ್ವಜಾರೋಹಣಗೈದರು.

SDPI ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ SM ಬಶೀರ್ ರವರ ಮುಖ್ಯ ಅಥಿತಿಯಾಗಿ ಆಗಮಿಸಿ,ಹಿತನುಡಿಗಳನ್ನಾಡಿದರು.ಪಾವೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಅನ್ಸಾರ್ ಇನೋಳಿ ಸಂಸ್ಥಾಪನಾ ದಿನದ ಸಂದೇಶ ಭಾಷಣ ಮಾಡಿದರು.


ಈ ಸಂದರ್ಭದಲ್ಲಿ ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೆಹರುನ್ನಿಸಾ ಬಶೀರ್,ಸದಸ್ಯರಾದ ಇಕ್ಬಾಲ್ ಇನೋಳಿ,ಮುನ್ನೂರು ಬ್ಲಾಕ್ ಅಧ್ಯಕ್ಷರು MK ಕಮರುದ್ದೀನ್, ಗ್ರಾಮ ಸಮಿತಿ ಉಪಾಧ್ಯಕ್ಷರಾದ ಸಲೀಮ್ ಇನೋಳಿ,ಕೋಶಾಧಿಕಾರಿ ಸಿದ್ದೀಕ್ ಬದ್ರಿಯಾನಗರ,ಮಲಾರ್‌ ಹೆಲ್ಪ್‌ಲೈನ್ ಅಧ್ಯಕ್ಷರು ಕಬೀರ್ ಮಲಾರ್,ಬದ್ರಿಯಾ ಜುಮ್ಮಾ ಮಸೀದಿ‌ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ,MES ಅಧ್ಯಕ್ಷರಾದ ಉಸ್ಮಾನ್ ರವರು, ಬೂತ್ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.ಇನೋಳಿ ಬೂತ್ ಸಮಿತಿಯ ವತಿಯಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕ್ವಿಝ್ ವಿಜೇತರಿಗೆ ಬಹುಮಾನ ನೀಡಲಾಯಿತು.

ಕಾರ್ಯದರ್ಶಿ ಆಸಿಫ್ ಬದ್ರಿಯಾನಗರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Join Whatsapp
Exit mobile version