Home ಟಾಪ್ ಸುದ್ದಿಗಳು ಕನ್ನಡಿಗರ ಪಕ್ಷ ಸ್ಥಾಪನೆ‌ ಮಾಡ್ತೇವೆ: ನಾರಾಯಣ ಗೌಡ

ಕನ್ನಡಿಗರ ಪಕ್ಷ ಸ್ಥಾಪನೆ‌ ಮಾಡ್ತೇವೆ: ನಾರಾಯಣ ಗೌಡ

ಮುಂದಿನ ದಿನಗಳಲ್ಲಿ‌ ಅಪ್ಪಟ ಕನ್ನಡಿಗರ ಪಕ್ಷ ಸ್ಥಾಪನೆ‌ ಮಾಡ್ತೇವೆ. ಮುಂಬರುವ ದಿನಗಳಲ್ಲಿ ವಿಧಾನಸೌಧ ಮೆಟ್ಟಿಲು ಹತ್ತುತ್ತೇವೆ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.

ಬೀದರ್‌ನಲ್ಲಿ ಮರಾಠಾ ಸಮುದಾಯದ ಸಭೆಗೆ ಪ್ರತಿಯಾಗಿ ಕರವೇ ಕಾರ್ಯಕರ್ತರ ಸಭೆ ನಡೆಸಲಾಗಿದ್ದು, ಬಳಿಕ ಮಾತನಾಡಿದ ನಾರಾಯಣಗೌಡ, ರಾಜ್ಯಾದ್ಯಂತ ಎಲ್ಲಾ ತಾಲುಕುಗಳಲ್ಲಿ‌ ನಮ್ಮ‌ ಕಾರ್ಯಕರ್ತರಿದ್ದಾರೆ. ಎಲ್ಲರೂ ಸದೃಡರಾಗಿದ್ದೇವೆ, ಕನ್ನಡಿಗರ ಪಕ್ಷ ಕಟ್ಟುತ್ತವೆ ಎಂದಿದ್ದಾರೆ.

ಈಗಾಗಲೇ ಬೆಳಗಾವಿಯಲ್ಲಿ‌ ಎಮ್‌ಇಎಸ್ ಮುಗಿಸಿದ್ದೇವೆ‌. ಈಗ ಬೀದರ್‌ಗೆ ಬರ್ತಾ ಇದ್ದಾರೆ, ಇಲ್ಲೂ ನಮ್ಮ ಕಾರ್ಯಕರ್ತರ ಪಡೆ ಗಟ್ಟಿಯಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎಮ್‌ಇಎಸ್‌ ನೆಲೆಯೂರಲು ಬಿಡಲ್ಲ ಎಂದು ಇದೇ ಸಮಯ ಎಮ್‌ಇಎಸ್‌ಗೆ ಕರವೇ ರಾಜ್ಯಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version