Home ಟಾಪ್ ಸುದ್ದಿಗಳು ಮಂಗಳೂರಿನಲ್ಲಿ ಬಿರುಗಾಳಿ ಮಳೆ: ಶಾಲೆ, ಮನೆಗಳಿಗೆ ಹಾನಿ, ವಿದ್ಯುತ್ ಕಂಬ ಧರಾಶಾಹಿ

ಮಂಗಳೂರಿನಲ್ಲಿ ಬಿರುಗಾಳಿ ಮಳೆ: ಶಾಲೆ, ಮನೆಗಳಿಗೆ ಹಾನಿ, ವಿದ್ಯುತ್ ಕಂಬ ಧರಾಶಾಹಿ

►ಕೃಷ್ಣಾಪುರದ ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿ, ಶಿಕ್ಷಕಿಗೆ ಗಾಯ


ಮಂಗಳೂರು: ಶುಕ್ರವಾರ ಮಧ್ಯಾಹ್ನ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಬೀಸಿದ ಬಿರುಗಾಳಿ ಮಳೆ ಅವಾಂತರ ಸೃಷ್ಟಿಸಿದೆ.

ಶಾಲೆ, ಮನೆಯ ಮೇಲ್ಛಾವಣಿ ಕುಸಿದು, ಹಲವಾರು ವಿದ್ಯುತ್ ಕಂಬ ಧರಾಶಾಹಿಯಾಗಿರುವ ಘಟನೆ ಸುರತ್ಕಲ್ ನ ಕೃಷ್ಣಪುರದಲ್ಲಿ ನಡೆದಿದೆ.

ಕೃಷ್ಣಪುರ ಕಾರುಣ್ಯ ವಿದ್ಯಾಲಯದ ಮೇಲ್ಛಾವಣಿ ಕುಸಿದು ಬಿದ್ದು ವಿದ್ಯಾರ್ಥಿ ಹಾಗೂ ಶಿಕ್ಷಕಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.


ಬಡವಣೆಗೆ ಸಂಪರ್ಕವಿರುವ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಪಕ್ಕದ ಮನೆಯ ಶೀಟ್ ಹಾರಿ ಬಂದು ಇನ್ನೊಂದು ಮನೆಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಭಾರೀ ಗಾಳಿ ಬೀಸಿದ ಪರಿಣಾಮ ಮನೆಯ ಹಂಚು ಹಾರಿ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ.

Join Whatsapp
Exit mobile version