Home ಟಾಪ್ ಸುದ್ದಿಗಳು ಬಾಂಗ್ಲಾದೇಶಕ್ಕೆ ರಾಜಕೀಯ, ಆರ್ಥಿಕ ಸಹಕಾರದ ಭರವಸೆ ನೀಡಿದ ಅಮೆರಿಕಾ

ಬಾಂಗ್ಲಾದೇಶಕ್ಕೆ ರಾಜಕೀಯ, ಆರ್ಥಿಕ ಸಹಕಾರದ ಭರವಸೆ ನೀಡಿದ ಅಮೆರಿಕಾ

ಢಾಕಾ: ಬಾಂಗ್ಲಾ ದೇಶದ ನಾಗರಿಕರಿಗೆ ಸಮಾನ ಮತ್ತು ಉತ್ತಮ ಭವಿಷ್ಯವನ್ನು ರೂಪಿಸಲು ಅಗತ್ಯವಿರುವ ಆರ್ಥಿಕ ಮತ್ತು ರಾಜಕೀಯ ಸಹಕಾರವನ್ನು ತಾನು ನೀಡುತ್ತೇನೆಂದು ಅಮೆರಿಕಾ ಮಧ್ಯಂತರ ಸರ್ಕಾರಕ್ಕೆ ಭರವಸೆಯನ್ನು ನೀಡಿದೆ.

ಪ್ರಮುಖ ಸುಧಾರಣೆಗಳ ಜಾರಿಗೆ ನೆರವು ನೀಡಬೇಕು ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್‌ ಅವರು ಮಾಡಿದ್ದ ಮನವಿಗೆ ಅಮೆರಿಕಾ ಹೀಗೆ ಪ್ರತಿಕ್ರಿಯಿಸಿದೆ.

ಅಮೆರಿಕಾದ ಖಜಾನೆ ಇಲಾಖೆಯ ಅಂತಾರಾಷ್ಟ್ರೀಯ ಹಣಕಾಸು ವಿಭಾಗದ ಸಹಾಯಕ ಕಾರ್ಯದರ್ಶಿ ಬ್ರೆಂಟ್‌ ನೀಮನ್‌ ನೇತೃತ್ವದ, ಬಹು ಏಜೆನ್ಸಿಗಳ ಪ್ರತಿನಿಧಿಗಳನ್ನು ಒಳಗೊಂಡಿದ್ದ ನಿಯೋಗವು ಭಾನುವಾರ ಢಾಕಾಗೆ ಭೇಟಿ ನೀಡಿತ್ತು.

‘ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಪ್ರೊ. ಯೂನಸ್‌ ಅವರ ಜೊತೆಗಿನ ಭೇಟಿ ವೇಳೆ ನಿಯೋಗ ಈ ಭರವಸೆ ನೀಡಿತು’ ಎಂದು ಅಮೆರಿಕಾದ ರಾಯಭಾರ ಕಚೇರಿ ಹೇಳಿಕೆ ನೀಡಿದೆ.

Join Whatsapp
Exit mobile version