ಮಂಗಳೂರು: ಕೋವಿಡ್ ಕಾರಣಗಳಿಂದ ಕಳೆದ ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು – ಕಾಸರಗೋಡು ಅಂತಾರಾಜ್ಯ ಬಸ್ ಸಂಚಾರ ಶುಕ್ರವಾರ ಆರಂಭವಾಗಿದೆ.
ಕರ್ನಾಟಕ ಮತ್ತು ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಬೆಳಗ್ಗಿನಿಂದ ಓಡಾಟ ನಡೆಸುತ್ತಿವೆ.
ಕೋವಿಡ್ ಕಾರಣದಿಂದ ಎರಡು ರಾಜ್ಯಗಳ ನಡುವೆ ಬಸ್ ಸಂಚಾರ ನಿರ್ಬಂಧಿಸಲಾಗಿತ್ತು. ಗಡಿ ಭಾಗ ತಲಪಾಡಿಯಲ್ಲಿ ಖಾಸಗಿ ವಾಹನಗಳ ತಪಾಸಣೆಯೂ ನಡೆಯುತ್ತಿತ್ತು.