ಪ.ಬಂಗಾಳ ಎಕ್ಸ್‌ಪ್ರೆಸ್‌ ರೈಲು ಮತ್ತು ಗೂಡ್ಸ್ ರೈಲು ಡಿಕ್ಕಿ: 15 ಮಂದಿ ಮೃತ

Prasthutha|

ಪ. ಬಂಗಾಳ: ಎಕ್ಸ್‌ಪ್ರೆಸ್‌ ರೈಲು ಮತ್ತು ಗೂಡ್ಸ್ ರೈಲು ಡಿಕ್ಕಿ ಹೊಡೆದು 15 ಮಂದಿ ಮೃತಪಟ್ಟು ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಉತ್ತರ ಬಂಗಾಳದ ನ್ಯೂ ಜಲ್‌ಪಾಯ್‌ಗುರಿ ನಿಲ್ದಾಣಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಗಂಗಪಾಣಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ‌ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

- Advertisement -

ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ ರೈಲು ತ್ರಿಪುರಾದ ಅಗರ್ತಲದಿಂದ ಕೋಲ್ಕತ್ತಾದ ಸೇಲ್‌ದಾ ನಿಲ್ದಾಣಕ್ಕೆ ಚಲಿಸುತ್ತಿದ್ದಾಗ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಭೋಗಿಗಳು ಹಳಿತಪ್ಪಿವೆ. ಒಂದು ಕೋಚ್‌‌ನ ಒಂದು ಭಾಗ ಮೇಲಕ್ಕೆ ಹೋಗಿದೆ.

Join Whatsapp
Exit mobile version