ನವದೆಹಲಿ: ಹಳೆಯ ನಗರದ ಐತಿಹಾಸಿಕ ಜಾಮಾ ಮಸೀದಿಯಲ್ಲಿ ಸತತ ಆರನೇ ವರ್ಷವೂ ಈದ್ ಪ್ರಾರ್ಥನೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಅಂಜುಮನ್ ಔಕಾಫ್ ಜಾಮಾ ತಿಳಿಸಿದೆ.
ಇಂದು ಫಜ್ರ್ ಪ್ರಾರ್ಥನೆಯ ನಂತರ ಪೊಲೀಸ್ ಸಿಬ್ಬಂದಿ ಶ್ರೀನಗರದ ಜಾಮಾ ಮಸೀದಿಯ ಗೇಟ್‌ಗಳನ್ನು ಮುಚ್ಚಿದ್ದಾರೆ. ಬೆಳಿಗ್ಗೆ 9:00 ಗಂಟೆಗೆ ನಿಗದಿಯಾಗಿದ್ದ ಈದ್ ಪ್ರಾರ್ಥನೆಯನ್ನು ಮಸೀದಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಔಕಾಫ್‌ಗೆ ಮಾಹಿತಿ ನೀಡಿದ್ದಾರೆ ಎಂದು 14 ನೇ ಶತಮಾನದ ಮಸೀದಿಯ ನಿರ್ವಹಣಾ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ಈದ್ ಧರ್ಮೋಪದೇಶ ನೀಡಲು ನಿಗದಿಯಾಗಿದ್ದ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದೂ ಹೇಳಿಕೆ ತಿಳಿಸಿದೆ.
2019 ರಿಂದ ಜಾಮಾ ಮಸೀದಿ ಮತ್ತು ಈದ್ಗಾದಲ್ಲಿ ಈದ್ ಪ್ರಾರ್ಥನೆಯನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.
ಈ ನಿರಾಕರಣೆಯನ್ನು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ದುಃಖಕರ ಉಲ್ಲಂಘನೆ ಎಂದು ಮಿರ್ವೈಝ್ ಬಣ್ಣಿಸಿದ್ದಾರೆ.