ಕುಮಾರಸ್ವಾಮಿ ಅವರ ನಾಯಕತ್ವ ಗುರುತಿಸಿ ಮೋದಿ ಸಚಿವ ಸ್ಥಾನ ನೀಡಿದ್ದಾರೆ: ನಿಖಿಲ್

Prasthutha|

ಬೆಂಗಳೂರು: ಮೋದಿ 3.0 ಕ್ಯಾಬಿನೆಟ್ ನಲ್ಲಿ ಕೇಂದ್ರ ಸಚಿವರಾಗಿ ನೇಮಕ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಂದೆ ಎಚ್ ಡಿ ಕುಮಾರಸ್ವಾಮಿ ಅವರ ನಾಯಕತ್ವವನ್ನು ಗುರುತಿಸಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

- Advertisement -


ಮಂಡ್ಯದಲ್ಲಿ ಭಾರೀ ಗೆಲುವಿನ ನಂತರ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿಕೊಂಡು ನಮಗೆಲ್ಲರಿಗೂ ತಿಳಿದಿರುವ ಹಾಗೆ ಅವರಿಗೆ ಅತ್ಯಂತ ಜವಾಬ್ದಾರಿಯುತವಾದ ಕೇಂದ್ರ ಸಚಿವ ಸ್ಥಾನವನ್ನು ನೀಡಲಾಗಿದೆ. ಅವರು ಇಂದು ಕೇಂದ್ರ ಸಚಿವರಾಗಿದ್ದು, ದೇಶ ಮತ್ತು ರಾಜ್ಯಕ್ಕಾಗಿ ಸೇವೆ ಸಲ್ಲಿಸಲಿದ್ದಾರೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಆಡಳಿತದಿಂದಾಗಿ ಅವರಿಗೆ ಈ ಅವಕಾಶ ಸಿಕ್ಕಿದೆ ಎಂದು ನಿಖಿಲ್ ಹೇಳಿದ್ದಾರೆ.

Join Whatsapp
Exit mobile version