►ಭದ್ರತಾ ಉಲ್ಲಂಘನೆಗಾಗಿ ನಾಲ್ವರು ಪೊಲೀಸರ ಅಮಾನತು
ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಪಿಸ್ತೂಲ್ ನೊಂದಿಗೆ ವ್ಯಕ್ತಿಯೊಬ್ಬ ಆಗಮಿಸಿದ್ದು, ಭದ್ರತಾ ಉಲ್ಲಂಘನೆಗಾಗಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಪರವಾನಗಿ ಹೊಂದಿರುವ ಪಿಸ್ತೂಲನ್ನು ಹಿಡಿದಿರುವ ವ್ಯಕ್ತಿ ಆಗಮಿಸಿ ಸಭಾಂಗಣವನ್ನು ಪ್ರವೇಶಿಸಿದ್ದಾನೆ. ಯೋಗಿ ಆದಿತ್ಯನಾಥ್ ಕಾರ್ಯಕ್ರಮಕ್ಕೆ ಆಗಮಿಸುವ 45 ನಿಮಿಷಗಳ ಮೊದಲು ಈ ಘಟನೆ ನಡೆದಿದೆ.
ಭದ್ರತೆ ಒದಗಿಸಲು ಸ್ಥಳೀಯ ಪೊಲೀಸರನ್ನು ಮತ್ತು ನೆರೆಯ ಜಿಲ್ಲೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸರ ಭದ್ರತಾ ಲೋಪದಿಂದಾಗಿ ಆಗಂತುಕ ಸಭಾಂಗಣವನ್ನು ಪ್ರವೇಶಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದ್ದ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಬಸ್ತಿ ಎಸ್ಪಿ ಆಶಿಶ್ ಶ್ರೀವಾಸ್ತವ ತಿಳಿಸಿದ್ದಾರೆ.