ಬೋಳಿಯಾರ್ ಘಟನೆ: ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ನೀಡಿ ಧೈರ್ಯ ತುಂಬಿದ SDPI ನಾಯಕರು

Prasthutha|

ಮಂಗಳೂರು; ವಿಜಯೋತ್ಸವ ಹೆಸರಿನಲ್ಲಿ ಇತ್ತೀಚೆಗೆ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಉಳ್ಳಾಲ ತಾಲೂಕಿನ ಬೋಳಿಯಾರ್ ಮಸೀದಿಯ ಮುಂಭಾಗದಲ್ಲಿ ಅಕ್ರಮ ಕೂಟ ಕಟ್ಟಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಪರಿಣಾಮ ಉಂಟಾದ ಅಹಿತಕರ ಘಟನೆಯ ಹೆಸರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಹಲವಾರು ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ, ವಿಚಾರಣೆಯ ನೆಪದಲ್ಲಿ ಮನೆಗಳಿಗೆ ದಾಳಿ ನಡೆಸಿದ ಪೊಲೀಸರು ಹಲವಾರು ಯುವಕರನ್ನು, ಮಹಿಳೆಯರನ್ನು ಠಾಣೆಗೆ ಕರೆದೊಯ್ದು ಎರಡು, ಮೂರು ದಿನಗಳ ಕಾಲ ಠಾಣೆಯಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ. ಈ ಘಟನೆಗಳಿಂದ ಭಯಭೀತರಾಗಿದ್ದ ಹಲವಾರು ಕುಟುಂಬಗಳನ್ನು SDPI ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯ SDPI ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಮತ್ತು ಜಿಲ್ಲಾಧ್ಯಕ್ಷರ ಅನ್ವರ್ ಸಾದತ್ ನೇತೃತ್ವದ ನಿಯೋಗ ಭೇಟಿಯಾಗಿ ಸಾಂತ್ವನ ನೀಡಿ ಧೈರ್ಯ ತುಂಬಿದ್ದಾರೆ.

- Advertisement -

ಸಂತ್ರಸ್ತ ಕುಟುಂಬದೊಂದಿಗೆ ಪಕ್ಷವು ನಿಂತು ಕೊಂಡು ನ್ಯಾಯ ದೊರೆಕಿಸಿ ಕೊಡಲಾಗುವುದು ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಎಂದು ನಿಯೋಗ ತಿಳಿಸಿದೆ.

ನಿಯೋಗದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷರ S N ಬಷೀರ್ ಹರೇಕಳ, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ತಲಪಾಡಿ, ದಕ್ಷಿಣ ಕ್ಷೇತ್ರದ ಅದ್ಯಕ್ಷ ಅಕ್ಬರ್ ರಾಝ, ಮಂಗಳೂರು ಕ್ಷೇತ್ರ ಕಾರ್ಯದರ್ಶಿಗಳಾದ ಅಶ್ರಫ್ ಮಂಚಿ, ಉಬೇದುಲ್ಲಾ ಅಮ್ಮೆಂಬಲ, ಸ್ಥಳೀಯ ಮುಖಂಡರಾದ ಆರಿಫ್ ಬೋಳಿಯಾರ್, ರಹಿಮಾನ್ ಮಠ, ಷರೀಫ್ ಬೋಳಿಯಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Join Whatsapp
Exit mobile version