Home ಟಾಪ್ ಸುದ್ದಿಗಳು ಹೊಟ್ಟೆಯಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಹೊಟ್ಟೆಯಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ತಿರುವನಂತಪುರಂ: ಹೊಟ್ಟೆಯಲ್ಲಿ ನಾಲ್ಕು ಕ್ಯಾಪ್ಸೂಲ್ ಒಳಗೆ ಒಂದು ಕೆಜಿ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಆರೋಪಿಯನ್ನು ಮಲಪ್ಪುರಂ ಜಿಲ್ಲೆಯ ವರಿಯಂಕೋಡ್ ನಿವಾಸಿ ನೌಫಲ್ (36) ಎಂದು ಗುರುತಿಸಲಾಗಿದೆ. ಪೊಲೀಸರು ಆತನ ದೇಹ ಮತ್ತು ಸಾಮಾನು ಸರಂಜಾಮುಗಳ ಸಂಪೂರ್ಣ ತಪಾಸಣೆ ನಡೆಸಿದರೂ ಚಿನ್ನಪತ್ತೆಯಾಗಿರಲಿಲ್ಲ. ನಂತರ, ಆತನನ್ನು ಕೊಂಡೋಟ್ಟಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ವಿವರವಾದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತನ  ಹೊಟ್ಟೆಯೊಳಗೆ ಚಿನ್ನವನ್ನು ಹೊಂದಿರುವ ನಾಲ್ಕು ಕ್ಯಾಪ್ಸೂಲ್ ಗಳು ಕಂಡು ಬಂದಿದೆ ಎನ್ನಲಾಗಿದೆ.

ಇದು ಕಳೆದ ಕೆಲವು ತಿಂಗಳುಗಳಲ್ಲಿ ಕರಿಪುರ ವಿಮಾನ ನಿಲ್ದಾಣದಲ್ಲಿ ವರದಿಯಾಗುತ್ತಿರುವ 59 ನೇ ಚಿನ್ನದ ಕಳ್ಳಸಾಗಣೆ ಪ್ರಕರಣವಾಗಿದೆ.

Join Whatsapp
Exit mobile version