ಬಂಟ್ವಾಳ | ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಬಸ್ ನಿರ್ವಾಹಕನ ವಿರುದ್ಧ ದೂರು

Prasthutha|

ಬಂಟ್ವಾಳ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವಳು ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರಿನಿಂದ ಬಿಸಿ ರೋಡ್ ಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಕಂಡಕ್ಟರ್ ಬಾಗಲಕೋಟೆ ಮೂಲದ ರಾಜು ಎಂಬಾತನ ವಿರುದ್ಧ ದೂರು ನೀಡಿದ್ದಾರೆ.

- Advertisement -


ಮಂಗಳೂರಿನಿಂದ ಬಿಸಿ ರೋಡ್ ಬಸ್ ನಲ್ಲಿ ಹತ್ತಿದ ಮಹಿಳೆಯು ನಿರ್ವಾಹಕನ ಬಳಿ ಚಿಲ್ಲರೆ ಇಲ್ಲ ಎಂದಾಗ ಕುಪಿತಗೊಂಡ ಕಂಡಕ್ಟರ್ ಆಕೆಯನ್ನು ಅಸಭ್ಯವಾಗಿ ನಿಂದಿಸಿ ಚಿಲ್ಲರೆ ಇಲ್ಲದಿದ್ದರೆ ಬಸ್ ಹತ್ತಬೇಡಿ ಎಂದು ಹೇಳಿದ್ದಾರೆ.


ಅಲ್ಲದೆ ಬಿಸಿರೋಡು ವರೆಗೂ ಚಿಲ್ಲರೆ ಕೊಡದೆ ಕಂಡೆಕ್ಟರ್ ಸತಾಯಿಸಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.

Join Whatsapp
Exit mobile version