ಕೊಡಗು: ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ ಕರವೇ ಕಾರ್ಯಕರ್ತರು

Prasthutha|

ಕೊಡಗು: ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯು ದಾನಿಗಳ ಸಹಕಾರದಿಂದ  ಗೋಪಾಲಪುರ ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ  ಉಚಿತ  ಪುಸ್ತಕ ಮತ್ತು ಪರಿಕರಗಳನ್ನು ವಿತರಿಸಲಾಯಿತು.  ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ  ಗೋಪಾಲಪುರ  ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯ 65  ವಿದ್ಯಾರ್ಥಿಗಳಿಗೆ ದಾನಿಗಳಾದ ಯೂತ್ ಜಿಲ್ಲಾಧ್ಯಕ್ಷ  ಮಿಥುನ್ ಗೌಡ ಉಚಿತ ಪುಸ್ತಕಗಳು ಮತ್ತು ಪರಿಕರಗಳನ್ನು ವಿತರಿಸಿದರು.

- Advertisement -

ಇದೇ ಸಂದರ್ಭದಲ್ಲಿ ಗೋಪಾಲಪುರ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರ ವತಿಯಿಂದ ಪುಸ್ತಕ ದಾನಿ  ಮಿಥುನ್ ಗೌಡರಿಗೆ ಸನ್ಮಾನ ಮಾಡಿದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಬ್ಲಾಕ್ ಯುವ ನಾಯಕ  ಕಿರಣ್, ಕೊಡ್ಲಿಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ಕೆ ಪ್ರಸನ್ನ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ, ತಾಲೂಕು ಕರವೇ ಕಾರ್ಯದರ್ಶಿಗಳಾದ ರಾಮನಹಳ್ಳಿ  ಪ್ರವೀಣ್, ನಿಡ್ತ ಗ್ರಾಮ ಪಂಚಾಯತಿ ಸದಸ್ಯರಾದ ಮನು, ಕರವೇ ರಾಮನಹಳ್ಳಿ  ಘಟಕದ ಅಧ್ಯಕ್ಷರಾದ ಹರೀಶ್, ರಾಜಣ್ಣ, ಮಂಜು, ರಾಣಿ, ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Join Whatsapp
Exit mobile version