ಬೋಳಿಯಾರಿನ ಮುಸ್ಲಿಮರ ಸ್ಥಿತಿ ಶೋಚನಿಯವಾಗುತ್ತಿದೆ: SDPI

Prasthutha|

ಮಂಗಳೂರು: ಬೋಳಿಯಾರಿನ ಮುಸ್ಲಿಮರ ಸ್ಥಿತಿ ಶೋಚನಿಯವಾಗುತ್ತಿದೆ, ಪೊಲೀಸರು ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಗುರಿಯಾಗಿಸಿ ಕಾರ್ಯಚರಣೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಬೋಳಿಯಾರಿನ ಮಸೀದಿ ಮುಂದೆ ಬಂದು ಅಸಭ್ಯವಾಗಿ ನಡೆದುಕೊಂಡು, ಅಶ್ಲೀಲ ಮತ್ತು ಕಾನೂನು ಬಾಹಿರ, ಪ್ರಚೋನಾಧಿಕಾರಿ ಘೋಷಣೆಗಳನ್ನು ಕೂಗಿ ಗೂಂಡಾಗಿರಿ ಪ್ರದರ್ಶಿಸಿದ ಹಿಂದುತ್ವ ಸಂಘಟನೆಯ ಒಂದೇ ಒಂದು ವ್ಯಕ್ತಿಯನ್ನು ಬಂಧಿಸುವುದಿರಲಿ, ಕರೆದು ವಿಚಾರಣೆಯನ್ನೂ ಮಾಡಲಿಲ್ಲ. ಆದರೆ ಚೂರಿ ಇರಿತದ ನೆಪವೊಡ್ಡಿ ಆ ಪ್ರದೇಶದ ಮುಸ್ಲಿಮರನ್ನು ಪೊಲೀಸರು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. 14 ಕ್ಕೂ ಹೆಚ್ಚು ಮುಸ್ಲಿಮರನ್ನು ಬಂಧಿಸಿದ್ದಾರೆ. ಇದು ತಾರತಮ್ಯ ನೀತಿಯಾಗಿದ್ದು, ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಕರಾವಳಿಯ ಮುಸ್ಲಿಮರ ಮೇಲೆ ಈ ತಾರತಮ್ಯ ನೀತಿ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ರಕ್ಷಣೆ ಮತ್ತು ಹಕ್ಕುಗಳ ಮರುಸ್ಥಾಪನೆ ಭರವಸೆ ನೀಡಿ ಮುಸ್ಲಿಮರ ಮತಗಳನ್ನು ಸಾರಾಸಗಟಾಗಿ ಪಡೆದುಕೊಂಡ ಕಾಂಗ್ರೆಸ್ ಪಕ್ಷ ಈಗ ಮುಸ್ಲಿಮರನ್ನು ಶೋಷಿಸುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಸ್ವರೂಪದ ಹೋರಾಟಕ್ಕೆ ಇಲ್ಲಿನ ಮುಸ್ಲಿಂ ಸಮುದಾಯ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

- Advertisement -

ಈ ಎಚ್ಚರಿಕೆ ನೀಡುವ ಸಲುವಾಗಿ ದಕ್ಷಿಣ ಕನ್ನಡದಲ್ಲಿ ಇಂದು SDPI ವತಿಯಿಂದ “ಕೊಣಾಜೆ ಚಲೋ” ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜೋರು ಮಳೆ ಇದ್ದರೂ ಸಹ ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿ, ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸದ್ದಾರೆ. ಅವರೆಲ್ಲರಿಗೂ ಕ್ರಾಂತಿಕಾರಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.

Join Whatsapp
Exit mobile version