ಭಾರೀ ಪ್ರತಿಭಟನೆಗೆ ಮಣಿದ ಕೆನ್ಯಾದ ಅಧ್ಯಕ್ಷ: ತೆರಿಗೆ ಹೆಚ್ಚಳ ಮಸೂದೆ ರದ್ದು

Prasthutha|

ನೈರೋಬಿ: ದೇಶಾದ್ಯಂತ ನಡೆದ ಭಾರೀ ಪ್ರತಿಭಟನೆಗೆ ಮಣಿದ ಕೆನ್ಯಾದ ಅಧ್ಯಕ್ಷ ವಿಲಿಯಂ ರೂಟೊ ವಿವಾದಾತ್ಮಕ ತೆರಿಗೆ ಹೆಚ್ಚಳ ಮಸೂದೆಯನ್ನು ವಾಪಸು ಪಡೆಯುವುದಾಗಿ ಹೇಳಿದ್ದಾರೆ.

- Advertisement -

ತೆರಿಗೆ ಹೆಚ್ಚಳ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಂಸತ್‍ಗೆ ಬೆಂಕಿ ಹಚ್ಚಲಾಗಿತ್ತು. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿರುವುದಾಗಿ ಕೆನ್ಯಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಮಾಡಿತ್ತು.

ದೇಶವನ್ನುದ್ದೇಶಿಸಿ ಮಾತನಾಡಿದ ರೂಟೊಕೆನ್ಯಾ, ಜನತೆಗೆ ಈ ಮಸೂದೆ ಒಪ್ಪಿಗೆಯಿಲ್ಲ ಎಂಬುದನ್ನು ನಾನು ಒಪ್ಪಿಕೊಂಡು ಮಸೂದೆಗೆ ಸಹಿ ಹಾಕುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಮಸೂದೆಯ ಬಗ್ಗೆ ಯುವಜನತೆಯೊಂದಿಗೆ ಸಂವಾದ ನಡೆಸಲಾಗುವುದು ಎಂದು ಹೇಳಿದ್ದಾರೆ.

Join Whatsapp
Exit mobile version