ನ್ಯಾಯ ನೋಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಕ್ಕೆ ಆಕ್ರೋಶಗೊಂಡ ಕೇರಳ ಆಹಾರ ಸಚಿವ

Prasthutha|

►ಕೌಟುಂಬಿಕ ಕಲಹ ಸಂಬಂಧ ಪೊಲೀಸರಿಗೆ ಕರೆ ಮಾಡಿದ್ದ ವೇಳೆ ಇಬ್ಬರ ನಡುವೆ ಮಾತಿನ‌ಚಕಮಕಿ

- Advertisement -

ತಿರುವನಂತಪುರಂ: ಪ್ರಕರಣವೊಂದರ ಸಂಬಂಧ ಪೊಲೀಸ್ ಠಾಣೆಗೆ ಕರೆಮಾಡಿ ವೃತ್ತ ನಿರೀಕ್ಷಕರ ಬಳಿ ಪ್ರಕರಣದ ಬಗ್ಗೆ ಗಮನಹರಿಸುವಂತೆ ಕೇಳಿಕೊಂಡಿದ್ದ ಆಹಾರ ಸಚಿವರಿಗೆ, ವೃತ್ತ ನಿರೀಕ್ಷಕರು ‘ನ್ಯಾಯ ನೋಡಿ ತೀರ್ಮಾನ ಕೈಗೊಳ್ಳುತ್ತೇನೆ‌’ ಎಂದಿದ್ದು ಸಚಿವರ‌ ಆಕ್ರೋಶಕ್ಕೆ ಕಾರಣವಾಗಿದೆ.

ಕೇರಳ ಆಹಾರ ಸಚಿವ ಹಾಗೂ ತಿರುವನಂತಪುರಂ ಜಿಲ್ಲೆಯ ನೆಡುಮಂಗಾಡ್‌ ವಿಧಾನ ಸಭಾ ಕ್ಷೇತ್ರದ ಶಾಸಕ‌ ಜಿ.ಆರ್ ಅನಿಲ್ ಕೌಟುಂಬಿಕ ‌ಕಲಹ‌ ಪ್ರಕರಣವೊಂದರ ಸಂಬಂಧ ವಟ್ಟಪ್ಪಾರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಕರೆ ಮಾಡಿದ್ದು, ‌ಪ್ರಕರಣದ ಕುರಿತು ಗಮನಹರಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವೃತ್ತ ನಿರೀಕ್ಷಕ, ದೂರುದಾರರು ಠಾಣೆಗೆ ಆಗಮಿಸಿದ್ದು ಇದೊಂದು ‌ಕೌಟುಂಬಿಕ ಕಲಹವಾಗಿದೆ ಎಂದಿದ್ದರು.

- Advertisement -

ಈ ವೇಳೆ ಸಚಿವರು ಹೌದು ಇದು ಕೌಟುಂಬಿಕ ಕಲಹವಾಗಿದ್ದು ದೂರು‌ ನೀಡಿದ ಮಹಿಳೆಯ ಎರಡನೇ ಗಂಡನಿಂದ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ವಿವರಿಸಿದ್ದರು.

ಈ ವೇಳೆ ವೃತ್ತ ನಿರೀಕ್ಷಕ ‘ನಾನು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ನ್ಯಾಯ ನೋಡಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದಿದ್ದರು. ಇದರಿಂದ ಆಕ್ರೋಶಗೊಂಡ ಸಚಿವರು ಮಹಿಳೆಯ ಮೇಲೆ ಆದ ದೌರ್ಜನ್ಯ ‌ಹಿನ್ನೆಲೆಯಲ್ಲಿ ನಾಳೆ ಹೆಚ್ಚಿನ ಅನಾಹುತ ನಡೆಯದಿರಲೆಂದು ಕರೆ‌ ಮಾಡಿದ್ದೇನೆ ಎಂದಿದ್ದರು. ಈ ಬಳಿಕ ವೃತ್ತ ನಿರೀಕ್ಷಕರು‌ ಮತ್ತು ಸಚಿವರ‌ ನಡುವೆ ಮಾತಿನ ಚಕಮಕಿ ನಡೆದಿದೆ.

‘ಸಚಿವರು ಕರೆ ಮಾಡಿದರೆಂದು ಆತನನ್ನು ಎತ್ತಿ ತರಲು ಸಾಧ್ಯವಿಲ್ಲ. ನ್ಯಾಯದ ಪರ ಕಾನೂನು ‌ಮೂಲಕವಷ್ಟೆ ಕ್ರಮ ಕೈಗೊಳ್ಳಲು ಸಾಧ್ಯ’ ಎಂದು ವೃತ್ತ ನಿರೀಕ್ಷಕರು ಸಚಿವರ ಬಳಿ ಪುನರುಚ್ಛರಿಸಿದರು. ಇದರಿಂದ ಮತ್ತಷ್ಟು ಕುಪಿತಗೊಂಡ ಆಹಾರ ಸಚಿವ ಮತ್ತು ವೃತ್ತ ನಿರೀಕ್ಷಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದೀಗ ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೃತ್ತ ನಿರೀಕ್ಷಕರ ಬಳಿ ವರದಿ ನೀಡುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

Join Whatsapp
Exit mobile version