ಎರಡು ದಿನಗಳಲ್ಲಿ ₹298.5 ಕೋಟಿ ಗಳಿಸಿದ ಪ್ರಭಾಸ್ ಅಭಿನಯದ ‘ಕಲ್ಕಿ 2898ಎಡಿ’

Prasthutha|

ನಟ ಪ್ರಭಾಸ್ ಅಭಿನಯದ ‘ಕಲ್ಕಿ 2898ಎಡಿ’ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲಿಯೇ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ₹298.5 ಕೋಟಿ ಗಳಿಸಿದೆ ಎಂದು ಸಿನಿಮಾ ತಯಾರಕರು ತಿಳಿಸಿದ್ದಾರೆ.

- Advertisement -


ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್, ‘ಚಿತ್ರ ತೆರೆಕಂಡ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ₹191.5 ಕೋಟಿಯನ್ನು ಗಳಿಸಿದೆ. ಎರಡನೇ ದಿನವಾದ ಶುಕ್ರವಾರ ₹107 ಕೋಟಿಯನ್ನು ಸಂಗ್ರಹಿಸಿದೆ. ಚಿತ್ರಕ್ಕೆ ಪ್ರಪಂಚದ ಮೂಲೆ ಮೂಲೆಗಳಿಂದ ಪ್ರೀತಿ ಹರಿದು ಬರುತ್ತಿದೆ. ‘ಕಲ್ಕಿ 2898 ಎಡಿ’ ಬಿಡುಗಡೆಯಾದ ಎರಡು ದಿನಗಳಲ್ಲಿ ಒಟ್ಟು ₹298.5 ಕೋಟಿ ಗಳಿಸಿದೆ’ ಎಂದು ತಿಳಿಸಿದೆ.


ವೈಜಯಂತಿ ಮೂವೀಸ್ ನಿರ್ಮಾಣದ ಈ ಸಿನಿಮಾ ಜೂನ್ 27ರಂದು ಎಲ್ಲ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

Join Whatsapp
Exit mobile version