ಕೇರಳ: ನಿಫಾ ವೈರಸ್‌‌ಗೆ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಮೃತ

Prasthutha|

ಕೋಯಿಕ್ಕೋಡ್: ನಿಫಾ ವೈರಸ್‌‌ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಇಂದು ಮೃತಪಟ್ಟಿದ್ದಾನೆ.

- Advertisement -

ಮಲಪ್ಪುರಂ ಜಿಲ್ಲೆಯವನಾದ ಬಾಲಕನಲ್ಲಿ ನಿಫಾ ಸೋಂಕು ಇರುವುದು ಕೇರಳ ಸರ್ಕಾರ ಶನಿವಾರ ದೃಢಪಡಿಸಿತ್ತು. ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆಯಾಗಿದೆಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದರು. ಬಾಲಕನ ಮೊದಲ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲು ಸೂಚಿಸಲಾಗಿತ್ತು.

ನಿಪಾ ವೈರಸ್ ಸೋಂಕು ಹಂದಿಗಳು ಮತ್ತು ಹಣ್ಣಿನ ಬಾವಲಿಗಳಂತಹ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಪ್ರಾಣಿಜನ್ಯ ಕಾಯಿಲೆಯಾಗಿದೆ. ನಿಪಾ ಸಾಮಾನ್ಯವಾಗಿ ಪ್ರಾಣಿಗಳಿಂದ ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತದೆ. ಇದು ನೇರವಾಗಿ ಜನರ ನಡುವೆಯೂ ಇದು ಹರಡಬಹುದಾದರ ಸೋಂಕಾಗಿದೆ.



Join Whatsapp
Exit mobile version