Home ಟಾಪ್ ಸುದ್ದಿಗಳು ರಾಜ್ಯ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಿಸಿದ ಕೇರಳ ಸರ್ಕಾರ: ಕಾಂಗ್ರೆಸ್, ಬಿಜೆಪಿ ಕಿಡಿ

ರಾಜ್ಯ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಿಸಿದ ಕೇರಳ ಸರ್ಕಾರ: ಕಾಂಗ್ರೆಸ್, ಬಿಜೆಪಿ ಕಿಡಿ

ತಿರುವನಂತಪುರಂ: ಕೇರಳದಲ್ಲಿ ಪಿಣರಾಯಿ ವಿಜಯನ್ ಸರ್ಕಾರ ಐಎಎಸ್ ಅಧಿಕಾರಿಯೊಬ್ಬರನ್ನು ರಾಜ್ಯ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಸರ್ಕಾರದ ಈ ಕ್ರಮ ರಾಜಕೀಯ ಚರ್ಚೆ ಹುಟ್ಟು ಹಾಕಿದೆ. ಈ ನಿರ್ಧಾರವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯವನ್ನು ಸ್ವತಂತ್ರ ದೇಶ ಎಂದು ಪರಿಗಣಿಸಬಾರದು ಉಭಯ ಪಕ್ಷಗಳ ನಾಯಕರು ಕಿಡಿಗಾರಿದ್ದಾರೆ.

ಯಾವುದೇ ರಾಜ್ಯ ಸರ್ಕಾರವು ಯಾವುದೇ ಸ್ವತಂತ್ರ ವಿದೇಶಿ ಸಂಬಂಧಗಳನ್ನು ಹೊಂದಿಲ್ಲ. ಆದರೆ ರಾಜ್ಯ ಸರ್ಕಾರಗಳು ತಮ್ಮ ನಿವಾಸಿಗಳನ್ನು ಒಳಗೊಂಡಿರುವ ವಿಷಯಕ್ಕಾಗಿ ವಿದೇಶದಲ್ಲಿ ರಾಯಭಾರ ಕಚೇರಿಗಳಿಲ್ಲದೆ ಕೆಲಸ ಮಾಡುವುದು ಸಂಪೂರ್ಣವಾಗಿ ಸೂಕ್ತವಾಗಿದೆ. ಆದರೆ ಒಬ್ಬ ಅಧಿಕಾರಿಗೆ ಈ ರೀತಿಯ ನಿರ್ದಿಷ್ಟ ಜವಾಬ್ದಾರಿಯನ್ನು ನೀಡುವುದು ಅಸಾಮಾನ್ಯವಾಗಿದೆ. ಆದರೆ ಆಕೆಗೆ ತನ್ನದೇ ಆದ ಯಾವುದೇ ವಿದೇಶಿ ಸಂಬಂಧದ ಜವಾಬ್ದಾರಿ ಇಲ್ಲ, ಅದು ಮೂಲತಃ ಭಾರತ ಸರ್ಕಾರದ ಸಂಸ್ಥೆಗಳ ಮೂಲಕ ಇರುತ್ತದೆ ಎಂದು ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಹೇಳಿದ್ದಾರೆ.

ಐಎಎಸ್ ಅಧಿಕಾರಿ ಕೆ ವಾಸುಕಿ ಅವರನ್ನು ರಾಜ್ಯದ ವಿದೇಶಾಂಗ ಕಾರ್ಯದರ್ಶಿ’ಯಾಗಿ ನೇಮಕ ಮಾಡಿರುವುದು ಅಸಾಂವಿಧಾನಿಕ ಮತ್ತು ಫೆಡರಲ್ ತತ್ವಗಳ ಉಲ್ಲಂಘನೆಯಾಗಿದೆ ಮುಖ್ಯಮಂತ್ರಿಗೆ ಸ್ವಂತ ಕಾನ್ಸುಲೇಟ್ ಮತ್ತು ವಿದೇಶಾಂಗ ಸಚಿವರ ಅಗತ್ಯವಿದೆ ಎಂದು ಅನಿಸುತ್ತದೆ. ವಿದೇಶಾಂಗ ವ್ಯವಹಾರಗಳು ಕೇಂದ್ರದ ವ್ಯಾಪ್ತಿಗೆ ಬರುತ್ತಿದ್ದು, ಇದರಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸುತ್ತಿರುವುದು ದೇಶಕ್ಕೆ ಒಳ್ಳೆಯ ಸಂದೇಶವಲ್ಲ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ.

Join Whatsapp
Exit mobile version