ಪ್ರತಿಯೊಬ್ಬ ವ್ಯಕ್ತಿಗೂ ಬಯಸಿದ್ದನ್ನು ಧರಿಸುವ ಹಕ್ಕು ಇದೆ: ನಿತೀಶ್‌ ಕುಮಾರ್

Prasthutha|

- Advertisement -

ಪಟ್ನಾ: ಪ್ರತಿಯೊಬ್ಬ ವ್ಯಕ್ತಿಗೂ ಬಯಸಿದ್ದನ್ನು ಧರಿಸುವ ಹಕ್ಕು ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ‘ಯಾರಾದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಂಡರೆ ಅದು ವಿವಾದಾತ್ಮಕ ವಿಷಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕು ಇದೆ. ಈ ವಿಷಯದಲ್ಲಿ ನಮ್ಮದೇನೂ ಆಕ್ಷೇಪಗಳಿಲ್ಲ. ಅಂತಹ ಯಾವ ವಿವಾದಗಳೂ ಬಿಹಾರದಲ್ಲಿಲ್ಲ’ ಎಂದು ನಿತೀಶ್‌ ಹೇಳಿದ್ದಾರೆ.

- Advertisement -

ಬಿಹಾರದ ಶಾಲೆಗಳಲ್ಲಿ ಮಕ್ಕಳು ಒಂದೇ ರೀತಿಯ ಬಟ್ಟೆ ಧರಿಸುತ್ತಾರೆ. ನಾವು ಪರಸ್ಪರರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ. ಅವರ ಧರ್ಮ ಅಥವಾ ಸಂಸ್ಕೃತಿಯ ಆಚರಣೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದ್ದರಿಂದಲೇ ಇಂತಹ ವಿಷಯಗಳತ್ತ ಗಮನ ಹರಿಸುವುದಿಲ್ಲ ಎಂದಿದ್ದಾರೆ.

Join Whatsapp
Exit mobile version