ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು (ಜೂನ್ 1) ಪ್ರಗತಿಯಲ್ಲಿದೆ. ಎಲ್ಲರ ಗಮನವೂ ಈಗ ಚುನಾವಣೋತ್ತರ ಸಮೀಕ್ಷೆ ಮೇಲಿದೆ.
ಮತದಾನ ಮುಕ್ತಾಯವಾದ ಕೂಡಲೇ ಮಾಧ್ಯಮ ಹಾಗೂ ಇತರೆ ಸಂಸ್ಥೆಗಳು ತಾವು ನಡೆಸಿರುವ ಮತಗಟ್ಟೆ ಸಮೀಕ್ಷೆಯನ್ನು ಬಿತ್ತರ ಮಾಡಲಿವೆ.
ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಮಾಧ್ಯಮಗಳು ಜೂನ್ 1ರ ಸಂಜೆ 6.30ರ ಬಳಿಕ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಪ್ರಸಾರ ಮಾಡಬಹುದಾಗಿದೆ.