Home ಟಾಪ್ ಸುದ್ದಿಗಳು ಕರಾವಳಿಯಿಂದ ಐವನ್ ಡಿಸೋಜ ವಿಧಾನ ಪರಿಷತ್’ಗೆ ?

ಕರಾವಳಿಯಿಂದ ಐವನ್ ಡಿಸೋಜ ವಿಧಾನ ಪರಿಷತ್’ಗೆ ?

ಮಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕರಾವಳಿ ಕಾಂಗ್ರೆಸ್ ನಿಂದ ಈ ಬಾರಿ ಮಾಜಿ ಎಂ ಎಲ್ ಸಿ ಐವನ್ ಡಿಸೋಜ ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.

ಈ ಬಾರಿ ಕರಾವಳಿಯಿಂದ ಮಾಜಿ ಸಚಿವ ರಮಾನಾಥ ರೈ, ಹಾಲಿ ಸದಸ್ಯ ಹರೀಶ್ ಕುಮಾರ್ , ಕಣಚೂರು ಮೋನು ಹಾಗೂ ಐವನ್  ಡಿಸೋಜ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಮತ್ತೊಮ್ಮೆ ಐವನ್ ಡಿಸೋಜ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂದು ತಿಳಿದು ಬಂದಿದೆ. 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಏಳು ಸ್ಥಾನಗಳನ್ನು, 66 ಶಾಸಕರನ್ನು ಹೊಂದಿರುವ ಬಿಜೆಪಿ ಮೂರು ಮತ್ತು 19 ಶಾಸಕರನ್ನು ಹೊಂದಿರುವುದರಿಂದ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

Join Whatsapp
Exit mobile version