Home ಟಾಪ್ ಸುದ್ದಿಗಳು ನೈರುತ್ಯ ಪದವೀಧರ ಕ್ಷೇತ್ರ| ಗೆಲ್ಲಬೇಕಾದ ಪದವೀಧರರ ನಿಜವಾದ ಪ್ರತಿನಿಧಿ ಆಯನೂರು ಮಂಜುನಾಥ್

ನೈರುತ್ಯ ಪದವೀಧರ ಕ್ಷೇತ್ರ| ಗೆಲ್ಲಬೇಕಾದ ಪದವೀಧರರ ನಿಜವಾದ ಪ್ರತಿನಿಧಿ ಆಯನೂರು ಮಂಜುನಾಥ್

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಅನುಭವಿ, ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಕಣಕ್ಕಿಳಿದಿರುವ ಡಾ.ಧನಂಜಯ ಸರ್ಜಿ ನಡುವೆ ನೇರ ಹಣಾಹಣಿ ಏರ್ಪಪಟ್ಟಿದೆ.

ನೈರುತ್ಯ ಪದವೀಧರ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ನ್ಯಾಮತಿ, ಹೊನ್ನಾಳಿ (30 ವಿಧಾನಸಭಾ, 5 ಲೋಕಸಭಾ ಕ್ಷೇತ್ರ) ವ್ಯಾಪ್ತಿಯನ್ನು ಒಳಗೊಂಡಿರುವ ವಿಶಾಲ ಕ್ಷೇತ್ರ. ಈ ಬಾರಿ 11 ಮಂದಿ ಕಣದಲ್ಲಿದ್ದಾರೆ. ‘ಹಳೇ ಹುಲಿ’ ಆಯನೂರು ಮಂಜುನಾಥ್ ಪ್ರಬಲ ಅಭ್ಯರ್ಥಿಯಾಗಿದ್ದು, ಇವರ ಮಣಿಸಲು ಎನ್ ಡಿಎ ಮೈತ್ರಿಕೂಟ ನಾನಾ ಕಸರತ್ತು ನಡೆಸುತ್ತಿದೆ.

ಆಯನೂರು ಮಂಜುನಾಥ ಅವರು ಈ ಹಿಂದೆ ಲೋಕಸಭಾ ಸದಸ್ಯ, ಶಾಸಕ, ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯಸಭಾ ಸದಸ್ಯರಾಗಿ ದೀರ್ಘಕಾಲ ಸೇವೆ ಸಲ್ಲಿಸಿದವರು. ತನ್ನ ಅಧಿಕಾರವಧಿಯಲ್ಲಿ ಯಾವ ಉದ್ದಿಮೆಯನ್ನೂ ನಡೆಸದ ಓರ್ವ ಅಪರೂಪದ ರಾಜಕಾರಣಿ. ಗ್ರಾಮೀಣ ಹಿನ್ನೆಲೆಯಿಂದ ಬಂದ ಆಯನೂರು ಮಂಜುನಾಥ್ ಅವರದ್ದು ಸುಮಾರು 47 ವರ್ಷಗಳಿಗೂ ಮಿಕ್ಕ ಅವಿರತ ಹೋರಾಟದ ಬದುಕು. ಅವರು ಕಾರ್ಮಿಕ ಸಂಘಟನೆಯ ಮುಖಂಡನಾಗಿ ಬೆಳೆದು ಬಂದವರು. ಈಗಲೂ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ದೊಡ್ಡಮಟ್ಟದಲ್ಲಿ ಹೋರಾಡುತ್ತಿದ್ದಾರೆ.

ಲೋಕಸಭಾ ರಾಜ್ಯಸಭಾ ಸದಸ್ಯ ಅವಧಿಯಲ್ಲಿ ಆಯನೂರು ಮಂಜುನಾಥ ಅವರು ಆಹಾರ ನಿಗಮದ ಅಧ್ಯಕ್ಷ, ಪ್ರವಾಸೋದ್ಯಮ, ಸಾರಿಗೆ, ಕೇಂದ್ರದ ಕಾರ್ಮಿಕ ನೌಕರರಿಗೆ ಸಂಬಂಧಪಟ್ಟ ತ್ರಿಪಕ್ಷೀಯ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿ, ಆಯಾ ಕ್ಷೇತ್ರಗಳ ಪರಿಣಿತರಿಂದ ಮೆಚ್ಚುಗೆ ಸಂಪಾದಿಸಿದ್ದಾರೆ.

ಕಳೆದ ಅವಧಿಯಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೇಲ್ಮನೆಗೆ ಆಯ್ಕೆಯಾಗಿದ್ದ ಆಯನೂರು ಮಂಜುನಾಥ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಬಾರಿ ಕಾಂಗ್ರೆಸ್ ಹುರಿಯಾಳು. ಮತದಾರರು ಈ ಬಾರಿಯೂ ತಮ್ಮನ್ನು ‘ಕೈ’ ಬಿಡುವುದಿಲ್ಲ ಎಂಬ ಭರವಸೆಯಲ್ಲಿರುವ ಅವರು ಕ್ಷೇತ್ರದ ಆರು ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

Join Whatsapp
Exit mobile version