ಪ್ರತಿಯೊಬ್ಬ ಹಿಂದೂ ಕೂಡ ಮನೆಯಲ್ಲಿ ಖಡ್ಗ ಇಟ್ಟುಕೊಳ್ಳಬೇಕು: ವಿವಾದಿತ ಹೇಳಿಕೆ ನೀಡಿದ RSS ಮುಖಂಡ !

Prasthutha|

ಕೇಸರಿ ಧ್ವಜ ರಾಷ್ಟ್ರಧ್ವಜ, ವಂದೇ ಮಾತರಂ ರಾಷ್ಟ್ರಗೀತೆ, ಭಗವದ್ಗೀತೆ ರಾಷ್ಟ್ರೀಯ ಗ್ರಂಥವಾಗಬೇಕು

- Advertisement -

ವಿಜಯಪುರ: ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ ಪದವನ್ನು ತೆಗೆಯಬೇಕು. ಶಸ್ತ್ರದಿಂದ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯ. ಆದ್ದರಿಂದ ಪ್ರತಿಯೊಂದು ಹಿಂದೂ ಕೂಡ ಮನೆಯಲ್ಲಿ ಖಡ್ಗ ಇಟ್ಟುಕೊಳ್ಳಬೇಕು ಎಂದು RSS ಮುಖಂಡ ಆನಂದ್ ಕುಲಕರ್ಣಿ ವಿಜಯಪುರದಲ್ಲಿ ದಸರಾ ದಿನ ಏರ್ಪಡಿಸಿದ್ದ ದುರ್ಗಾ ದೌಡ್ ನೀಡಿರುವ ಹೇಳಿಕೆ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಭಾಷಣದುದ್ದಕ್ಕೂ ಕುಲಕರ್ಣಿ ಉದ್ರೇಕಕಾರಿ ಹೇಳಿಕೆ ನೀಡಿರುವುದು ವೀಡಿಯೋದಲ್ಲಿದೆ. ವಿಜಯಪುರದ ಶಿವಾಜಿ ಪ್ರತಿಮೆ ಬಳಿ ಸಂಘಪರಿವಾರ ಸಂಘಟನೆಗಳು ದಸರಾ ದಿನದಂದು ಏರ್ಪಡಿಸಿದ್ದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಲವಾರು ಪ್ರದರ್ಶಿಸುತ್ತಿರುವುದು ವೀಡಿಯೋದಲ್ಲಿದೆ.

- Advertisement -


ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕಾನೂನು ತಜ್ಞರ ಗಮನಕ್ಕೆ ತಾರದೆ ಸಮಾಜವಾದಿ ಪದವನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ. ಕಾನೂನು ತಜ್ಞರಿಗೆ ಗೊತ್ತಾಗದಂತೆ, ಅಂಬೇಡ್ಕರ್ ಗೆ ಗೊತ್ತಾಗದಂತೆ ಇಂದಿರಾಗಾಂಧಿ, ಅಲ್ಪಸಂಖ್ಯಾತರಿಗೆ ತೃಪ್ತಿಪಡಿಸಲಿಕ್ಕೆ ಜಾತ್ಯತೀತ ಪದ ಸೇರಿಸಿದ್ದಾರೆ ಎಂದು ಅವರು ಆರೋಪಿಸಿದರು.


ಹಿಂದೂ ರಾಷ್ಟ್ರ ರಕ್ಷಣೆ ಜಾತ್ಯತೀತದಿಂದ ಸಾಧ್ಯವಿಲ್ಲ. ಭಾರತ ಹಿಂದೂ ರಾಷ್ಟ್ರವಾಗಬೇಕು. ನಿಮ್ಮ ಕೈಯಲ್ಲಿ ಖಡ್ಗ ಇರುವುದನ್ನು ನೋಡಿದಾಗ ಸಂತೋಷವಾಗುತ್ತಿದೆ. ಈ ದೇಶವನ್ನು ಹಿಂದೂ ಧರ್ಮವನ್ನು ರಕ್ಷಿಸಲು ಈ ಖಡ್ಗದಿಂದ ಮಾತ್ರ ಸಾಧ್ಯ. ಯಾವುದೇ ದೇವರನ್ನು ತೆಗೆದುಕೊಳ್ಳಿ ಅವರಲ್ಲಿ ಶಸ್ತ್ರವಿತ್ತು ಎಂಬುದನ್ನು ಅರಿಯಬೇಕು. ಈ ಕೇಸರಿ ಧ್ವಜ ವಿಧಾನಸೌಧ, ಕೆಂಪುಕೋಟೆಯ ಮೇಲೆ ಹಾರಬೇಕು, ಕೇಸರಿ ಧ್ವಜ ಹಿಂದೂಸ್ತಾನದ ರಾಷ್ಟ್ರಧ್ವಜ ಆಗಬೇಕು. ವಂದೇ ಮಾತರಂ ರಾಷ್ಟ್ರಗೀತೆ ಆಗಬೇಕು. ಭಗವದ್ಗೀತೆ ಈ ದೇಶದ ರಾಷ್ಟ್ರೀಯ ಗ್ರಂಥವಾಗಬೇಕು. ಸಮಾನ ನೀತಿ ಸಂಹಿತೆ ಜಾರಿಯಾಗಬೇಕು ಎಂದು ಹೇಳಿದರು.


ಮುಸ್ಲಿಮರನ್ನು ಹೊರಗೆ ಹಾಕಿದರೆ ಅವರಿಗೆ ಹೋಗಲು 50 ದೇಶಗಳಿವೆ, ಕ್ರಿಶ್ಚಿಯನ್ನರನ್ನು ಹೊರಗೆ ಹಾಕಿದರೆ ಅವರಿಗೆ ಹೋಗಲು 150 ದೇಶಗಳಿವೆ. ಆದರೆ ಹಿಂದೂಗಳಿಗೆ ಒಂದೇ ಹಿಂದೂಸ್ತಾನ, ಈ ದೇಶ ಹಿಂದೂಗಳ ವಾಸಸ್ಥಾನ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ, ಸಂಘಪರಿವಾರದ ಮುಖಂಡರಾದ ಉಮೇಶ್ ವಂಡಾಲ್, ರಮೇಶ್ ಬಿದ್ನೂರ್ ಮತ್ತಿತರರು ಹಾಜರಿದ್ದರು.

Join Whatsapp
Exit mobile version