Home ಟಾಪ್ ಸುದ್ದಿಗಳು ಉಡುಪಿ | ಗಾಳಿ, ಮಳೆ ಹಾನಿ: ಮಾಹಿತಿ ಪಡೆದು, ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳಕರ್

ಉಡುಪಿ | ಗಾಳಿ, ಮಳೆ ಹಾನಿ: ಮಾಹಿತಿ ಪಡೆದು, ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳಕರ್

ಬೆಂಗಳೂರು: ಉಡುಪಿ ಜಿಲ್ಲೆಯ ಕೆಲವೆಡೆ ಗಾಳಿ ಮತ್ತು ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.


ಬೆಂಗಳೂರಿನಲ್ಲಿರುವ ಸಚಿವರು ಸಚಿವ ಸಂಪುಟ ಸಭೆಗೆ ಹೊರಡುವ ಮುನ್ನ ಉಡುಪಿಯ ಸಧ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿದರು.
ಜಿಲ್ಲೆಯ ಅಮಾವಾಸ್ಯೆ ಬಯಲು ಸೇರಿದಂತೆ ಕೆಲವೆಡೆ ಮಳೆ, ಗಾಳಿಯಿಂದ ಉಂಟಾಗಿರುವ ಹಾನಿಯ ಮಾಹಿತಿ ಪಡೆದರು.


ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ ಸಚಿವರು, ಪರಿಹಾರಕ್ಕೆ ಕ್ರಮ ಕೈಗಳ್ಳುವಂತೆ ತಿಳಿಸಿದರು.

Join Whatsapp
Exit mobile version