Home ಟಾಪ್ ಸುದ್ದಿಗಳು ಪಿ.ಎಂ.ಸಿ ಬ್ಯಾಂಕ್ ವಂಚನೆ: ಸಂಜಯ್ ರಾವುತ್ ಪತ್ನಿಗೆ ಈಡಿ ಸಮನ್ಸ್

ಪಿ.ಎಂ.ಸಿ ಬ್ಯಾಂಕ್ ವಂಚನೆ: ಸಂಜಯ್ ರಾವುತ್ ಪತ್ನಿಗೆ ಈಡಿ ಸಮನ್ಸ್

ಮುಂಬೈ: ಪಿ.ಎಂ.ಸಿ ಬ್ಯಾಂಕ್ ವಂಚನೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶಿವಸೇನಾ ನಾಯಕ ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್ ಗೆ ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್ ಕಳುಹಿಸಿದೆ. ಅವರು ಡಿಸೆಂಬರ್ 29ರಂದು ಏಜೆನ್ಸಿಯ ಮುಂಬೈ ಕಚೇರಿಗೆ  ಭೇಟಿ ನೀಡಲಿದ್ದಾರೆ.  

ವರ್ಷಾ ರಾವತ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪ್ರವೀಣ್ ರಾವತ್ ನಡುವಿನ ಆರೋಪಿತ ಹಣಕಾಸಿನ ವಹಿವಾಟಿನ ಕುರಿತು ಏಜೆನ್ಸಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಂಜಾಬ್ ಮತ್ತು ಮಹಾರಾಷ್ಟ್ರ ಕೊ ಆಪರೇಟೀವ್ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಮೂರನೆ ಬಾರಿಗೆ ಅವರನ್ನು ವಿಚಾರಣೆಯಲ್ಲಿ ಭಾಗವಹಿಸುವಂತೆ ಕರೆಯಲಾಗಿದೆ. ಆರೋಗ್ಯ ಕಾರಣಗಳಿಂದ ಈ ಹಿಂದೆ ಎರಡು ಸಮನ್ಸ್ ಗಳನ್ನು ಆಕೆ ತಿರಸ್ಕರಿಸಿದ್ದರು. ಡಿ.11ರಂದು ವಿಚಾರಣೆಗೆ ಹಾಜರಾಗುವಂತೆ ಅವರಲ್ಲಿ ಹೇಳಲಾಗಿತ್ತು.

ಕಾಂಗ್ರೆಸ್ ಮತ್ತು ಶರದ್ ಪವಾರ್ ರ ಎನ್.ಸಿ.ಪಿ ಜೊತೆ ಮೈತ್ರಿಯೊಂದಿಗೆ ಮಹಾರಾಷ್ಟ್ರವನ್ನು ಆಳುತ್ತಿರುವ ಶಿವಸೇನೆ ಇದಕ್ಕೆ ಪ್ರತಿಕ್ರಿಯಿಸುತ್ತಾ, ಇದು ರಾಜಕೀಯ ಪ್ರೇರಿತ  ಮತ್ತು ಕೇಂದ್ರವು ಅನ್ಯಾಯವಾಗಿ ಗುರಿಪಡಿಸುತ್ತಿದೆ ಎಂದು ಹೇಳಿದೆ.

ಬಿಜೆಪಿಯಿಂದ ಎನ್.ಸಿ.ಪಿಗೆ ಪಕ್ಷಾಂತರಗೊಂಡಾ ಏಕ್ ನಾಥ್ ಖಡ್ಸೆ ಅವರನ್ನು ಕೂಡ ಈಡಿ ಅಕ್ರಮ ಹಣ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.30ರಂದು  ವಿಚಾರಣೆಗೆ ಹಾಜರಾಗುವಂತೆ ಕರೆ ಕಳುಹಿಸಿದೆ.

Join Whatsapp
Exit mobile version