Home ಟಾಪ್ ಸುದ್ದಿಗಳು ಈಡಿ ಕಚೇರಿ ಹೊರಗೆ ‘ಬಿಜೆಪಿ ಕಾರ್ಯಾಲಯ’ ಬ್ಯಾನರ್

ಈಡಿ ಕಚೇರಿ ಹೊರಗೆ ‘ಬಿಜೆಪಿ ಕಾರ್ಯಾಲಯ’ ಬ್ಯಾನರ್

ಮುಂಬೈ: ಜಾರಿ ನಿರ್ದೇಶನಾಲಯ (ಈಡಿ) ಕಚೇರಿಯ ಮುಂದೆ ‘ಬಿಜೆಪಿ ಪ್ರಾದೇಶಿಕ ಕಾರ್ಯಾಲಯ’ ಎಂದು ಬರೆಯಲಾದ ಬ್ಯಾನರನ್ನು ಹಾಕುವ ಮೂಲಕ ಶಿವಸೇನೆ ಈಡಿಯನ್ನು ಅಣಕಿಸಿದೆ.

ಪಿ.ಎಂ.ಸಿ ಬ್ಯಾಂಕ್ ಹಣ ವರ್ಗಾವಣೆ ಸಂಬಂಧಿಸಿದಂತೆ ಶಿವಸೇನೆಯ ರಾಜ್ಯಸಭಾ ಸಂಸದ ಮತ್ತು ಮುಖ್ಯ ವಕ್ತಾರ ಸಂಜಯ್ ರಾವುತ್ ರ ಪತ್ನಿ ವರ್ಷಾರಿಗೆ ವಿಚಾರಣೆಗೆ ಹಾಜರಾಗುವಂತೆ ಈಡಿ ಸಮನ್ಸ್  ಕಳುಹಿಸಿದ ಒಂದು ದಿನ ನಂತರ ಈ ಘಟನೆ ನಡೆದಿದೆ.

ಡಿಸೆಂಬರ್ 29ರಂದು ವಿಚಾರಣೆಗೆ ಹಾಜರಾಗುವಂತೆ ವರ್ಷಾ ರಾವುತ್ ಗೆ ಈಡಿ ಕರೆ ಕಳುಹಿಸಿದೆ.

ಬಿಜೆಪಿಯೇತರ ಪಕ್ಷಗಳು ಆಳುತ್ತಿರುವ ರಾಜ್ಯಗಳನ್ನು ಗುರಿಪಡಿಸುವುದಕ್ಕಾಗಿ ಬಿಜೆಪಿ ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಈಡಿಯಂತಹ ಕೆಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.

Join Whatsapp
Exit mobile version