Home ಟಾಪ್ ಸುದ್ದಿಗಳು ಎಸ್.ಸಿ.ಎಸ್.ಟಿ ಮೀಸಲಾತಿ ದುರ್ಬಳಕೆ ತಡೆಗೆ ಕಾವಲು ಸಮಿತಿ ನೇಮಕಕ್ಕೆ ಡಿ.ಎಸ್.ವೀರಯ್ಯ ಆಗ್ರಹ

ಎಸ್.ಸಿ.ಎಸ್.ಟಿ ಮೀಸಲಾತಿ ದುರ್ಬಳಕೆ ತಡೆಗೆ ಕಾವಲು ಸಮಿತಿ ನೇಮಕಕ್ಕೆ ಡಿ.ಎಸ್.ವೀರಯ್ಯ ಆಗ್ರಹ

ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾಗಿರುವ ಅನುದಾನ ಇತರ ಸೌಲಭ್ಯಗಳು ದುರ್ಬಳಕೆಯಾಗದಂತೆ ತಡೆಯಲು ಮೀಸಲಾತಿ ಕಾವಲು ಸಮಿತಿಯನ್ನು ರಚಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು ಎಂದು ದೇವರಾಜು ಅರಸು ಟ್ರಕ್ ಅಂಡ್ ಟರ್ಮಿನಲ್ ನಿಗಮದ ಅಧ್ಯಕ್ಷ , ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ತಿಳಿಸಿದರು.

ಬೆಂಗಳೂರಿನ ಶಾಂತಿನಗರದಲ್ಲಿರುವ ಕಚೇರಿಯಲ್ಲಿ ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಸೌಧದ ಪಕ್ಕದಲ್ಲಿರುವ ವಿಕಾಸ ಸೌಧಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ಸೌಧ ಎಂದು ಹೆಸರಿಸಬೇಕು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕು. ದಲಿತ ವರ್ಗದ ಮೀಸಲಾತಿ ತಡೆಗಟ್ಟಲು ಮೀಸಲಾತಿ ಕಾವಲು ಸಮಿತಿಯನ್ನು ಜಾರಿತರಬೇಕು ಎಂದು ಒತ್ತಾಯಿಸಿದರು.

ಶುಭಾಶಯ ಕೋರಿ ಮಾತನಾಡಿದ ಬಹುಜನ ಸಂಘರ್ಷ ಸಮಿತಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಸ್ .ಲವ, ದಲಿತ ವರ್ಗದ ಉದ್ದಾರಕ್ಕಾಗಿ ತಮಗೆ ಸಿಕ್ಕ ಅಧಿಕಾರವಧಿಯಲ್ಲಿ ವೀರಯ್ಯ ಅವರು ಅನೇಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಅನುಷ್ಠಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಕೊಳಗೇರಿಗಳ ನಿವಾಸಿಗಳಿಗೆ ಅನೇಕ ಸವಲತ್ತುಗಳು ಸಿಗುವಲ್ಲಿ ಅವಿರತ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಘವೇಂದ್ರ ಬೇಳೂರು, ನಿಗಮದ ವಿವಿಧ ಸಿಬ್ಬಂದಿ ವರ್ಗದವರು, ಬಹುಜನ ಸಂಘರ್ಷ ಸಮಿತಿಯ ವಿವಿಧ ಪದಾಧಿಕಾರಿಗಳು ಡಿ.ಎಸ್ . ವೀರಯ್ಯ ನವರಿಗೆ ಶುಭ ಕೋರಿದರು.

Join Whatsapp
Exit mobile version