Home ಟಾಪ್ ಸುದ್ದಿಗಳು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ 50ಕ್ಕೂ ಅಧಿಕ ಮುಖಂಡರಿಂದ SDPI ಸೇರ್ಪಡೆ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ 50ಕ್ಕೂ ಅಧಿಕ ಮುಖಂಡರಿಂದ SDPI ಸೇರ್ಪಡೆ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಪದಗ್ರಹಣ ಸಮಾರಂಭ ಜಿಲ್ಲಾ ಉಸ್ತುವಾರಿ ಹಾಗೂ ಪಕ್ಷದ ರಾಜ್ಯ ಕೋಶಾಧಿಕಾರಿ ಸೈಯದ್ ಇಸ್ಹಾಕ್ ಹುಸೇನ್ (ಖಾಲಿದ್) ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕವಿತಾಳ ಪಟ್ಟಣದ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಫಯಾಝ್ ಹಾಗೂ ಉಪಾಧ್ಯಕ್ಷರಾಗಿ ಚಾಂದ್ ಪಾಷಾ, ಕಾರ್ಯದರ್ಶಿಯಾಗಿ ಮುಸ್ತಫಾ, ಸಹಕಾರ್ಯದರ್ಶಿಯಾಗಿ ರಸೂಲ್, ಕೋಶಾಧಿಕಾರಿಯಾಗಿ ಮುಹಮ್ಮದ್ ಅಮೀರ್ ಅಯ್ಕೆಯಾದರು.

ಈ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಯುವಕರು ಮತ್ತು ಹಿರಿಯರು ಎಸ್ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಕ್ಷದ ರಾಜ್ಯ ಕೋಶಾಧಿಕಾರಿ ಸೈಯದ್ ಇಸ್ಹಾಕ್ ಹುಸೇನ್ ಮಾತನಾಡಿ, ಪಕ್ಷದ ಅಗತ್ಯತೆ ಮತ್ತು ತತ್ವ ಸಿದ್ಧಾಂತಗಳ ಬಗ್ಗೆ ವಿವರಿಸಿದರು.

ಇನ್ನೋರ್ವ ಅತಿಥಿ ಜಿಲ್ಲಾ ಸಮಿತಿ ಸದಸ್ಯರೂ ಆದ ಮೀರ್ ಅಲಿ ಅವರು ಪಕ್ಷದ ನಿಲುವಿನ ಕುರಿತು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಎಸ್ಡಿಪಿಐ ತಾಲೂಕು ಸಂಘಟನಾ ಕಾರ್ಯದರ್ಶಿಯಾದ ಜಿಲಾನಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮೀರ್ ಅಲಿ ನೆರವೇರಿಸಿದರು.

Join Whatsapp
Exit mobile version