ನೂತನ 21 ತಾಲೂಕುಗಳಲ್ಲಿ ಬರ: ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ

Prasthutha|

ಬೆಂಗಳೂರು: ರಾಜ್ಯ ಸರ್ಕಾರ ಈ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತವೆಂದು ಒಟ್ಟು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿತ್ತು.
ರಾಜ್ಯದಲ್ಲಿ ಹೊಸದಾಗಿ ಬರ ಪೀಡಿತ ತಾಲೂಕು ಎಂದು ಘೋಷಿಸಿರುವ 21 ತಾಲೂಕುಗಳಲ್ಲಿ ಆ್ಯಪ್ ಮೂಲಕ ತಳಮಟ್ಟದ ನೈಜ ಸ್ಥಿತಿ ಪರಿಶೀಲಿಸಿ ಬರ ಕೈಪಿಡಿ ಅನ್ವಯ ದೃಢೀಕರಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಅ.9ರಂದು ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ತಾಲೂಕು ಗಳಲ್ಲಿ ಶೇ.10ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿ, ಪ್ರತಿ ಬೆಳೆಗಳ ಸುಮಾರು 5 ಜಮೀನುಗಳಿಗೆ (1 ಎಕರೆಗಿಂತ ಕಡಿಮೆ ಇಲ್ಲದ) ಭೇಟಿ ನೀಡಿ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಗೌಂಡ್ ಟ್ಯೂಶನಿಂಗ್ ಮಾಡಿ ಅ.11ರಂದು ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅ.13 ರಂದು 21 ತಾಲೂಕು ಗಳನ್ನು ಬರ ಪೀಡಿತ ಎಂದು ಘೋಷಿಸಿದೆ.

- Advertisement -

ಬರಪೀಡಿತ ನೂತನ 21 ತಾಲೂಕುಗಳು
ಚಾಮರಾಜನಗರ, ಕೃಷ್ಣರಾಜನಗರ, ಯಳಂದೂರು, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸೀಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ.

Join Whatsapp
Exit mobile version