Home ಟಾಪ್ ಸುದ್ದಿಗಳು ಬಿಜೆಪಿ,RSS ನಾಯಕರ ಮೇಲೆ ಕಠಿಣ ಸೆಕ್ಷನ್ ಇದ್ದರೂ ಬಂಧಿಸದಂತೆ ತಡೆಯುತ್ತಿರುವ ಕಾಂಗ್ರೆಸ್ ಸರ್ಕಾರ: ಎಸ್‌ಡಿಪಿಐ ಆಕ್ರೋಶ

ಬಿಜೆಪಿ,RSS ನಾಯಕರ ಮೇಲೆ ಕಠಿಣ ಸೆಕ್ಷನ್ ಇದ್ದರೂ ಬಂಧಿಸದಂತೆ ತಡೆಯುತ್ತಿರುವ ಕಾಂಗ್ರೆಸ್ ಸರ್ಕಾರ: ಎಸ್‌ಡಿಪಿಐ ಆಕ್ರೋಶ

ಸಂಘಪರಿವಾರಕ್ಕೆ ಹೆದರಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ: ಅನ್ವರ್ ಸಾದತ್ ಬಜತ್ತೂರು

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಹಾಗೂ ಸಂಘಪರಿವಾರ ನಾಯಕರು ಮುಸ್ಲಿಮರ ವಿರುದ್ಧ ಧ್ವೇಷ ಭಾಷಣ ಮಾಡುತ್ತಿದ್ದಾರೆ. ಆದರೆ ಪೋಲಿಸ್ ಇಲಾಖೆ ಕಠಿಣ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಭಾಗವಾಗಿ ಬಂಧಿಸುವ ಕಾರ್ಯಕ್ಕೆ ಮುಂದಾದರೂ ಸರ್ಕಾರವೇ ತಡೆಯುತ್ತದೆ. ನ್ಯಾಯಾಲಯದಲ್ಲಿ ಸರ್ಕಾರದ ಪ್ರತಿನಿಧಿಯಾಗಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ದ್ವೇಷ ಬಿತ್ತಿ ಸಮಾಜದಲ್ಲಿ ಅರಾಜಕತೆ ಮಾಡಲು ಯತ್ನಿಸಿದ ಬಿಜೆಪಿ ಸಂಘಪರಿವಾರದ ನಾಯಕರನ್ನು ಬಂಧಿಸಂತೆ ಕಾಂಗ್ರೆಸ್ ಸರಕಾರ ತಡೆಯುತ್ತದೆ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಮುಸ್ಲಿಮರ ಅತ್ಯಧಿಕ ಮತ ಪಡೆದು ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್ ಸರ್ಕಾರ ನೇರವಾಗಿ ಮುಸ್ಲಿಮರ ವಿರುದ್ಧ ಧ್ವೇಷ ಭಾಷಣ ಮಾಡುವ ಬಿಜೆಪಿ ಸಂಘಪರಿವಾರದ ನಾಯಕರಿಗೆ ಬೆಂಗಾವಲಾಗಿ ನಿಂತಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇತ್ತೀಚೆಗೆ ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಮಸೀದಿಯ ಮುಂಭಾಗ ಪ್ರಚೋದನಕಾರಿ ಭಾಷಣ ಮಾಡಿದ ಘಟನೆಗೆ ಮೂಲ ಕಾರಣ ಎಂದು ಮಂಗಳೂರು ಕಮಿಷನರ್‌ರವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಇಲ್ಲಿಯ ತನಕ ಒಬ್ಬನೇ ಒಬ್ಬ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿಲ್ಲ. ಆದರೆ ಅದಕ್ಕೆ ಕೆಲವು ಮುಸ್ಲಿಂ ಯುವಕರು ಪ್ರತಿರೋಧ ಒಡ್ಡಿದರು ಎಂಬ ಕಾರಣಕ್ಕಾಗಿ 19 ಮಂದಿಯ ಮೇಲೆ ಕಠಿಣ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, 50ಕ್ಕೂ ಹೆಚ್ಚು ಮುಸ್ಲಿಂ ಯುವಕರ ಮನೆಗೆ ರಾತ್ರೋರಾತ್ರಿ ದಾಳಿ ನಡೆಸಿ 13 ಯುವಕರನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ. ಆನಂತರವೂ ಈಗ FIRನಲ್ಲಿ ಹೆಸರೇ ಇಲ್ಲದ ಸಿರಾಜ್ ಎಂಬ ಯುವಕನನ್ನು ವಶಕ್ಕೆ ಪಡೆದಿದ್ದೀರಿ. ನಿಮಗೆ ಮುಸ್ಲಿಮರ ಬಂಧನ ದಾಹ ಮುಗಿದಿಲ್ಲವೇ ?
ದ.ಕ ಜಿಲ್ಲೆ ಪೋಲಿಸ್ ರಾಜ್ಯವಾಗುತ್ತಿದೆಯಾ ಎಂದು ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇ ವೇಳೆ ಘಟನೆಯ ಮೂಲ ಕಾರಣಕರ್ತರಾದ ಸಂಘಪರಿವಾರದ 5-6 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದರೂ, ಅವರು ಬಂಧನದಿಂದ ತಪ್ಪಿಸುವ ಸಲುವಾಗಿ ಆಸ್ಪತ್ರೆಯಲ್ಲಿಯೇ ಎಡ್ಮಿಟ್ ಆಗಿ ಇದೀಗ ಹೈಕೋರ್ಟ್ ನಿಂದ ಕಾಂಗ್ರೆಸ್ ಸರ್ಕಾರ ನೇಮಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಕೃಪೆಯಿಂದ ಬಂಧನದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಹಿಂದೆ ಶರಣ್ ಪಂಪ್‌ವೆಲ್, ಕಲ್ಲಡ್ಕ ಪ್ರಭಾಕರ್ ಭಟ್, ಹರೀಶ್ ಪೂಂಜಾ ಸೇರಿದಂತೆ ದ್ವೇಷ ಭಾಷಣ ಮಾಡುವ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಾದರು, ಠಾಣೆಗೆ ನುಗ್ಗಿ ಪೋಲೀಸರಿಗೆ ಅವಾಝ್ ಹಾಕಿ ದಾಂಧಲೆ ಸೃಷ್ಟಿಸಿ, ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದರೂ ಸ್ಟೇಷನ್‌ನಲ್ಲಿಯೇ ಜಾಮೀನು ನೀಡಲಾಗುತ್ತದೆ. ನ್ಯಾಯಾಲಯಕ್ಕೆ ಹೋದರೆ ಖುದ್ದು ಸರ್ಕಾರಿ ವಕೀಲರೇ ನ್ಯಾಯಾಧೀಶರಿಗೆ ‘ಇವರನ್ನು ಬಂಧಿಸುವುದಿಲ್ಲ’ ಎಂದು ಸರ್ಕಾರದ ನಿಲುವನ್ನು ವ್ಯಕ್ತಪಡಿಸುತ್ತಾರೆ ಎಂದು ಅನ್ವರ್ ಸಾದತ್ ವಿವರಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರುವುದು ಬೇಡವೆಂದು ಶೇಕಡಾ 90%ರಷ್ಟು ಮುಸಲ್ಮಾನರು ಕಾಂಗ್ರೆಸ್ ಗೆ ಮತಹಾಕಿ ಅಧಿಕಾರ ಕೊಟ್ಟಿದ್ದು, ಈಗ ಅದೇ ಮುಸ್ಲಿಂ ಸಮುದಾಯವನ್ನು ಬೀದಿಗೆ ತಳ್ಳುವಂತಹ ಕೃತ್ಯವನ್ನು ಕಾಂಗ್ರೆಸ್ ಮಾಡುತ್ತಿರುವುದು ಖಂಡನೀಯ.
ಒಂದು ವೇಳೆ ಸರ್ಕಾರಕ್ಕೆ ಮಾಹಿತಿ ಇಲ್ಲದೆ ಪಬ್ಲಿಕ್ ಪ್ರಾಸಿಕ್ಯೂಟರ್ ಸಂಘಪರಿವಾರದ ಆದೇಶವನ್ನು ಪಾಲನೆ ಮಾಡುವುದಾದರೆ ಯಾಕೆ ಸರ್ಕಾರ ಪ್ರಾಸಿಕ್ಯೂಟರ್‌ನ್ನು ಬದಲಾಯಿಸಿಲ್ಲ?
ರಾಜ್ಯದಲ್ಲಿ ಮುಸ್ಲಿಮರ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಜಂಟಿ ಪ್ರಾಯೋಜಿತದಲ್ಲಿ ನಡೆಯುವ ಷಡ್ಯಂತರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೂಡಲೇ ಸಂಘಪರಿವಾರ ಬೆಂಬಲಿತ ಪಬ್ಲಿಕ್ ಪ್ರಾಸಿಕ್ಯೂಟರ್ ನ್ನು ಬದಲಾಯಿಸಿ ಜಾತ್ಯಾತೀತ ಹಾಗೂ ನಿಲುವಿನ ವಕೀಲರನ್ನು ಪಬ್ಲಿಕ್ ಪ್ರಾಸಿಕ್ಯೂಟರನ್ನಾಗಿ ನೇಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ

Join Whatsapp
Exit mobile version