ದಕ್ಷಿಣ ಕನ್ನಡ ಜಿಲ್ಲೆಗೆ 9 ಹೊಸ ಪಲ್ಲಕ್ಕಿ ಬಸ್ ಗಳ ಸೇರ್ಪಡೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ 9 ಹೊಸ ಪಲ್ಲಕ್ಕಿ ಬಸ್ ಗಳು ಸೇರ್ಪಡೆಯಾಗಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ರಾಜಹಂಸ, ಐರಾವತ, ಅಂಬಾರಿಯಂತಹ ಐಷಾರಾಮಿ ಸ್ಲೀಪರ್ ಕೋಚ್ ಬಸ್ ಗಳುಲಭ್ಯವಿದ್ದು. ಇತ್ತೀಚೆಗೆ ಸೇರ್ಪಡೆಗೊಂಡ ಪಲ್ಲಕ್ಕಿ ಬಸ್ ಕೂಡ ಮಂಗಳೂರಿಗೆ ಲಗ್ಗೆ ಇಡಲಿದೆ.


ಸಾರಿಗೆ ನಿಗಮವು ಪ್ರಸ್ತುತ 12 ಬಸ್ ಗಳು ಕಾರ್ಯಾಚರಣೆಯಲಿದ್ದು, ಆ ಸಾಲಿಗೆ ಈಗ 40 ಪಲ್ಲಕ್ಕಿ ಬಸ್ ಗಳನ್ನು ಸೇರಿಸಲು ಸಂಸ್ಥೆಯು ಯೋಜಿಸಿದೆ. ಈ ಪೈಕಿ 8 ಬಸ್ ಗಳು ಮಂಗಳೂರಿಗೆ ಹಾಗೂ 4 ಬಸ್ ಗಳು ಪುತ್ತೂರು ವಿಭಾಗಕ್ಕೆ ಹೋಗಲಿವೆ.

- Advertisement -


ಪಲ್ಲಕ್ಕಿ ಬಸ್ಗಳು ಸೇರಿದಂತೆ ಬೆಂಗಳೂರಿಗೆ ತೆರಳುವ ಹಲವು ಬಸ್ಗಳಿದ್ದು, ಪುತ್ತೂರು ವಲಯಕ್ಕೆ 9 ಹೊಸ ಕರ್ನಾಟಕ ಸಾರಿಗೆ ಬಸ್ಗಳು ಆಗಮಿಸಲಿವೆ. ಹೆಚ್ಚುವರಿಯಾಗಿ, ರಾಜ್ಯ ಸಾರಿಗೆ ಸಂಸ್ಥೆಯು ಬಿ.ಸಿ.ರೋಡ್, ಧರ್ಮಸ್ಥಳ ಮತ್ತು ಮಡಿಕೇರಿ ಡಿಪೋಗಳಿಗೆ 2 ಬಸ್ ಗಳನ್ನು ಮತ್ತು ಸುಳ್ಯಕ್ಕೆ 1 ಬಸ್ ಗಳನ್ನು ನಿಯೋಜಿಸಲು ಯೋಜಿಸಿದೆ.

Join Whatsapp
Exit mobile version