Home ಟಾಪ್ ಸುದ್ದಿಗಳು ಪಠ್ಯದಿಂದ ‘ಸಾರೇ ಜಹಾಂ ಸೇ ಅಚ್ಛಾ’ ಕವಿತೆಯನ್ನೂ ತೆಗೆದು ಹಾಕಿದ ಚಕ್ರತೀರ್ಥನ ಸಮಿತಿ

ಪಠ್ಯದಿಂದ ‘ಸಾರೇ ಜಹಾಂ ಸೇ ಅಚ್ಛಾ’ ಕವಿತೆಯನ್ನೂ ತೆಗೆದು ಹಾಕಿದ ಚಕ್ರತೀರ್ಥನ ಸಮಿತಿ

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯ ಮತ್ತೊಂದು ಯಡವಟ್ಟು ಮುನ್ನಲೆಗೆ ಬಂದಿದೆ. ಕವಿ ಇಕ್ಬಾಲ್ ರಚಿಸಿರುವ ದೇಶಭಕ್ತಿ ಕವಿತೆಯನ್ನೇ ಸಮಿತಿ ತೆಗೆದು ಹಾಕಿದ್ದು, ಹೊಸ ವಿವಾದ ಸೃಷ್ಟಿಸಿದೆ.

ಈ ಕುರಿತು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಕೆಂಡಕಾರಿರುವ ಕಾಂಗ್ರೆಸ್ ಟ್ವೀಟ್ ಮೂಲಕ ಹರಿಹಾಯ್ದಿದೆ. ದೇಶಪ್ರೇಮದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಯ ನಕಲಿ ದೇಶಪ್ರೇಮಿಗಳೇ, ನೀವೇ ನೇಮಿಸಿದ ರೋ ಅಹಿತ ಎಂಬ ಮೂರ್ಖಾಧ್ಯಕ್ಷ ಮಕ್ಕಳ ಪಠ್ಯದಿಂದ ಇಕ್ಬಾಲ್ ವಿರಚಿತ “ಸಾರೇ ಜಹಾಂ ಸೇ ಅಚ್ಛಾ” ಎಂಬ ದೇಶಭಕ್ತಿ ಕವಿತೆಯನ್ನು ಕಿತ್ತುಹಾಕಿದ್ದಾನೆ. ಇದರ ವಿರುದ್ಧ ನಿಮ್ಮ ಹೋರಾಟ ಯಾವಾಗ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

ಈ ಹಿಂದೆ ಬಿ.ಎಂ. ಶರ್ಮಾರವರು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು ಎರಡು ತರಗತಿಗಳಲ್ಲಿ ಸೇರಿಸಿ ಸಮಿತಿ ಎಡವಟ್ಟು ಮಾಡಿತ್ತು.

Join Whatsapp
Exit mobile version