ಆನೆ ದಾಳಿಗೆ ವೃದ್ಧೆ ಬಲಿ: ಅಂತ್ಯಕ್ರಿಯೆ ವೇಳೆ ಮತ್ತೆ ದಾಳಿ !

Prasthutha|

ಭುವನೇಶ್ವರ: ಕಾಡಾನೆಯೊಂದು ವಯಸ್ಸಾದ ಮಹಿಳೆಯೊಬ್ಬಳ ಮೇಲೆ ದಾಳಿ ನಡೆಸಿ ಆಕೆಯ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯ ವೇಳೆ ಮತ್ತೆ ದಾಳಿ ನಡೆಸಿ ಮೃತದೇಹವನ್ನು ಎಳೆದಾಡಿದ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ರಾಯ್ ಪಾಲ್ ಗ್ರಾಮದ ನಿವಾಸಿ ಮಾಯಾ ಮರ್ಮು (70) ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ.

ಕೊಳವೆ ಬಾವಿಯಿಂದ ನೀರು ಸಂಗ್ರಹಿಸುವಾಗ ದಾಲ್ಮಾ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿ ಬಂದ ಕಾಡಾನೆಯೊಂದು ವೃದ್ಧೆಯ ಮೇಲೆ ದಾಳಿ ಮಾಡಿದೆ. ಆನೆಯ ತುಳಿತದಿಂದ ವೃದ್ಧೆ ಸಾವನ್ನಪ್ಪಿದ್ದಾಳೆ. ಇದಾದ ಬಳಿಕ ಕುಟುಂಬದವರು ಆಕೆಯ ಅಂತ್ಯಸಂಸ್ಕಾರ ನಡೆಸುತ್ತಿದ್ದ ವೇಳೆ ಮತ್ತೆ ದಿಢೀರ್ ದಾಳಿ ನಡೆಸಿದ ಆನೆ ಚಿತೆಯಿಂದ ಮಹಿಳೆಯ ದೇಹವನ್ನು ಎಳೆದಾಟಿತು. ಶವವನ್ನು ಕೂಡಾ ತುಳಿದು ಹಾಕಿ, ದೂರಕ್ಕೆ ಎಸೆದು ಓಡಿಹೋಯಿತು. ಕೆಲ ಗಂಟೆಗಳ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

- Advertisement -

 ಆನೆಯ ಈ ವಿಚಿತ್ರ ವರ್ತನೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದೆ.

Join Whatsapp
Exit mobile version