Home ಟಾಪ್ ಸುದ್ದಿಗಳು ಬಾರ್‌ ಗಿರಾಕಿಗಳಿಗೆ ತೊಂದರೆ ಆಗುತ್ತೆ ಎಂದು ಬೃಹತ್‌ ಮರವನ್ನೇ ಕಡಿದ ಭೂಪರು

ಬಾರ್‌ ಗಿರಾಕಿಗಳಿಗೆ ತೊಂದರೆ ಆಗುತ್ತೆ ಎಂದು ಬೃಹತ್‌ ಮರವನ್ನೇ ಕಡಿದ ಭೂಪರು

ಕಾಪು: ಬಾರ್‌ ಗೆ ಬರುವವರಿಗೆ ತೊಂದರೆ ಆಗುತ್ತೆ ಎಂದು ಬಹುವರ್ಷದ ಮರವನ್ನ ಕಡಿದು ಹಾಕಿದ ಘಟನೆ ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಕ್ಕಿಗಳ ಪಿಕ್ಕೆಗಳು ನೆಲಕ್ಕೆ ಬಿದ್ದು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮರವನ್ನು ಕಡಿಯಲಾಗಿದೆ ಎಂಬ ಆಘಾತಕಾರಿ ಮಾಹಿತಿ ದೊರಕಿದೆ. ಬಾರ್ ನಿರ್ಮಾಣವಾಗುವ ಮುನ್ನವೆ ಇದ್ದ ಈ ಮರವು ಸದ್ಯ ನೂರಾರು ಹಕ್ಕಿಗಳಿಗೆ ವಾಸಸ್ಥಾನವಾಗಿತ್ತು ಎನ್ನಲಾಗಿದೆ. ಕೆಲವು ಗೂಡುಗಳಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬರುವ ಮೊಟ್ಟೆಯೊಳಗಿನ ಮರಿಗಳಿದ್ದವು.

ಇಂತಹ ಮರವನ್ನು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುತ್ತೆಂಬ ದೃಷ್ಟಿಯಿಂದ ಕಡಿದು ಹಾಕಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ.

Join Whatsapp
Exit mobile version