Home ಕರಾವಳಿ ಮಂಗಳೂರು: ಕಾಂಕ್ರೀಟ್ ರಸ್ತೆ ಕಾಮಗಾರಿ ತಡೆಯಲು ರಸ್ತೆಯ ಮೇಲೆ ಮಲಗಿದ ಮಹಿಳೆ!

ಮಂಗಳೂರು: ಕಾಂಕ್ರೀಟ್ ರಸ್ತೆ ಕಾಮಗಾರಿ ತಡೆಯಲು ರಸ್ತೆಯ ಮೇಲೆ ಮಲಗಿದ ಮಹಿಳೆ!

ಮಂಗಳೂರು: ಮಹಾನಗರ ಪಾಲಿಕೆಯಿಂದ ನಡೆಯುತ್ತಿದ್ದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ವೇಳೆ ಮಹಿಳೆಯೋರ್ವಳು ಹೈಡ್ರಾಮ ನಡೆಸಿರುವ ಘಟನೆ ನಗರದ ಮಣ್ಣಗುಡ್ಡ ವಾರ್ಡ್ ನಲ್ಲಿ ಇಂದು ನಡೆದಿದೆ. ಸ್ಥಳೀಯ ನಿವಾಸಿ ವೈಲೇಟ್ ಪಿರೇರಾ ಎಂಬವರು ಕಾಮಗಾರಿ ವೇಳೆ ಈ ಜಾಗ ನನ್ನದು ಎಂದು ತಗಾದೆ ತೆಗೆದಿದ್ದು, ರಸ್ತೆ ಕಾಮಗಾರಿ ತಡೆಯಲು ಯತ್ನಿಸಿದ್ದಾರೆ.

https://twitter.com/PrasthuthaNews/status/1529073840390713345

ಕಾಮಗಾರಿಯ ವೇಳೆಯೇ ಛತ್ರಿ ಹಿಡಿದು‌‌ ಕಾಂಕ್ರೀಟ್ ಹಾಕಿದ ರಸ್ತೆಯ ಮೇಲೆ ಮಲಗಿದ ಮಹಿಳೆ ಸುಮಾರು 2 ಗಂಟೆಗಳ ಕಾಲ ಹಸಿ ಕಾಂಕ್ರೀಟ್ ಮೇಲೆಯೇ ಹೊರಳಾಡಿದ್ದಾರೆ. ಮಹಿಳೆಯ ಮನವೊಲಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನ ನಡೆಸಿದ್ದು ಫಲ ಕಾಣಲಿಲ್ಲ. ಬಳಿಕ 10 ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ಮೂಲಕ‌ ಮಹಿಳೆಯನ್ನು ಆಂಬುಲೆನ್ಸ್ ಮೂಲಕ‌ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.

Join Whatsapp
Exit mobile version