Home ಕರಾವಳಿ ವಿಟ್ಲದಲ್ಲಿ ವರನೊಬ್ಬ ಕೊರಗಜ್ಜ ಮಾದರಿಯ ವೇಷ ಧರಿಸಿದ ನೆಪ : ವಧುವಿನ ಮನೆಗೆ ಮುತ್ತಿಗೆ ಹಾಕಿ...

ವಿಟ್ಲದಲ್ಲಿ ವರನೊಬ್ಬ ಕೊರಗಜ್ಜ ಮಾದರಿಯ ವೇಷ ಧರಿಸಿದ ನೆಪ : ವಧುವಿನ ಮನೆಗೆ ಮುತ್ತಿಗೆ ಹಾಕಿ ಶಾಂತಿ ಕದಡಲು ಯತ್ನಿಸಿದ ಬಜರಂಗದಳದ ಕಾರ್ಯಕರ್ತರು !

ವಿಟ್ಲ: ಮದುಮಗನೋರ್ವ ಕೊರಗಜ್ಜನ ವೇಷಧರಿಸಿ ಕುಣಿದಿದ್ದಾನೆಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಮದುಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.

ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಯತ್ತ ಬಂದ ಬಜರಂಗದಳದ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಉಪ್ಪಳದ ವರನಿಗೆ ಇತ್ತೀಚೆಗೆ ಸಾಲೆತ್ತೂರಿನ ಹುಡುಗಿಯ ಜೊತೆ ವಿವಾಹವಾಗಿತ್ತು. ಮದುವೆಯ ರಾತ್ರಿ ವರನು ಸಂಗಡಿಗರೊಂದಿಗೆ ತಾಳ ಕಾರ್ಯಕ್ರಮಕ್ಕೆಂದು ಸಾಲೆತ್ತೂರಿಗೆ ಬಂದಾಗ ವರ ವಿಶಿಷ್ಟ ವೇಷ ಧರಿಸಿದ್ದು, ಅವರು ಕುಣಿದು ಕುಪ್ಪಳಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಮದುವೆ ಸಮಾರಂಭದಲ್ಲಿ ಇಂತಹ ಅತಿರೇಕವನ್ನು ಮಸ್ಲಿಂ ಸಮದಾಯದವರೇ ಅಧಿಕವಾಗಿ ಖಂಡಿಸಿದ್ದರು.

ವರ ಧರಿಸಿದ್ದ ವೇಷ ಕೊರಗಜ್ಜನದ್ದು ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Join Whatsapp
Exit mobile version