Home ಟಾಪ್ ಸುದ್ದಿಗಳು ರೋಗ ಹರಡುವ ಕೇಂದ್ರವಾದ ತೆಂಕ ಎಡಪದವು ಆಯುಷ್ಮಾನ್ ಆರೋಗ್ಯ ಕೇಂದ್ರ

ರೋಗ ಹರಡುವ ಕೇಂದ್ರವಾದ ತೆಂಕ ಎಡಪದವು ಆಯುಷ್ಮಾನ್ ಆರೋಗ್ಯ ಕೇಂದ್ರ

ಮಂಗಳೂರು: ತಾಲೂಕಿನ ತೆಂಕ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಪದವು -ಕುಪ್ಪೆಪದವು ಮುಖ್ಯ ರಸ್ತೆಯಲ್ಲಿರುವ ಆಯುಷ್ಮಾನ್ ಅರೋಗ್ಯ ಮಂದಿರ ಅವ್ಯವಸ್ತೆಯಿಂದ ಕೂಡಿದೆ. ಪೊದೆಗಳಿಂದ ಕೂಡಿರುವ ಆಯುಷ್ಮಾನ್ ಕೇಂದ್ರದ ಆವರಣವು ಮಲೇರಿಯಾ, ಡೆಂಗ್ಯೂ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಕೇಂದ್ರವಾಗುವ ಭೀತಿಯಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ವ್ಯಾಪಾಕವಾಗಿ ಹರಡುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಅರೋಗ್ಯ ಕೇಂದ್ರವೇ ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿ ಪರಿಣಮಿಸಿದೆ.

ಆರೋಗ್ಯ ಕೇಂದ್ರದ ಈ ಅವ್ಯವಸ್ಥೆ ಬಗ್ಗೆ ಅರೋಗ್ಯ ಅಧಿಕಾರಿಗಳು ಶೀಘ್ರವೇ ಕ್ರಮ ವಹಿಸಬೇಕೆಂದು ಎಸ್.ಡಿ.ಪಿ.ಐ ಗುರುಪುರ ಬ್ಲಾಕ್ ಕಾರ್ಯದರ್ಶಿ ಇರ್ಷಾದ್ ಅಡ್ಡೂರು ಅಗ್ರಹಿಸಿದ್ದಾರೆ. ಸಮಸ್ಯೆ ಪರಿಹರಿಸದಿದ್ದಲ್ಲಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಬೃಹತ್ ಪ್ರತಿಭಟನೆ ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version